ಚಿಂತಾಮಣಿ: ನಗರದ ಜೆ.ಎಂ.ಎಫ್. ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ 1,500 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥವಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ. ರಾಜೇಂದ್ರಕುಮಾರ್ ತಿಳಿಸಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ನಡೆದ ಅದಾಲತ್‌ಗೆ 1,840 ಪ್ರಕರಣ ದಾಖಲಾಗಿದ್ದವು. ಬ್ಯಾಂಕ್‌ನ 23 ಪ್ರಕರಣಗಳಲ್ಲಿ
₹ 1,51,15,586, ಸಿವಿಲ್ ವ್ಯಾಜ್ಯಗಳ 20 ಪ್ರಕರಣಗಳಲ್ಲಿ ₹ 42,22,744, ವಾಹನ ಅಪಘಾತಗಳ 3 ಪ್ರಕರಣಗಳಲ್ಲಿ ₹ 6.25 ಲಕ್ಷ ಪಿಟಿ ಕೇಸ್‌ಗಳ 1,343 ಪ್ರಕರಣಗಳಲ್ಲಿ ₹ 37.80 ಲಕ್ಷ, ಬೆಸ್ಕಾಂನ 29 ಪ್ರಕರಣಗಳಲ್ಲಿ ₹ 3,63,532, ಚೆಕ್ ಬೌನ್ಸ್ 6 ಪ್ರಕರಣಗಳಲ್ಲಿ ₹ 15.75 ಲಕ್ಷ ಹಾಗೂ ಇತರೆ 76 ಪ್ರಕರಣಗಳಲ್ಲಿ ₹ 3,18 ಲಕ್ಷ ರಾಜೀ ಸಂಧಾನದಿಂದ ಇತ್ಯರ್ಥವಾಗಿದೆ ಎಂದು ವಿವರಿಸಿದರು.

ಲೋಕ ಅದಾಲತ್‌ಗಳಲ್ಲಿ ಕಾನೂನು ಸೇವಾ ಸಮಿತಿಯಿಂದ ಮಾರ್ಗದರ್ಶನ, ನುರಿತ ವಕೀಲರ ಸಹಾಯ ದೊರೆಯುತ್ತದೆ. ರಾಜೀ ಮೂಲಕ ಇತ್ಯರ್ಥವಾದರೆ ಉತ್ತಮ ಬಾಂಧವ್ಯ, ಸೌಹಾರ್ದ ಇರುತ್ತದೆ. ನ್ಯಾಯಾಲಯಗಳಿಗೆ ಅಲೆಯುವ ಸಮಯ ಹಾಗೂ ಖರ್ಚು ಉಳಿತಾಯವಾಗುತ್ತದೆ ಎಂದರು.

ಸಣ್ಣಪುಟ್ಟ ಪ್ರಕರಣಗಳನ್ನು ರಾಜೀ ಮೂಲಕ ಬಗೆಹರಿಸಿಕೊಂಡರೆ ನ್ಯಾಯಾಲಯಗಳ ಮೇಲಿನ ಹೊರೆಯು ಕಡಿಮೆಯಾಗುತ್ತದೆ. ಶೀಘ್ರವಾಗಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರವಾಗುತ್ತದೆ ಎಂದು ತಿಳಿಸಿದರು.

ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎಚ್.ಎಸ್. ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶ ಜಿ.ಜೆ. ಶಿವಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.