ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್ ರೇಟಿಂಗ್ ಹೆಸರಿನಲ್ಲಿ ₹ 23 ಲಕ್ಷ ವಂಚನೆ

Published 3 ಮಾರ್ಚ್ 2024, 19:34 IST
Last Updated 3 ಮಾರ್ಚ್ 2024, 19:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಗೂಗಲ್ ರೇಟಿಂಗ್ ನೀಡಿ ಹಣ ಸಂಪಾದನೆ ಮಾಡಬಹುದು ಎಂದು ನಂಬಿಸಿ ಆನ್‌ಲೈನ್ ವಂಚಕರು ₹ 23 ಲಕ್ಷ ವಂಚಿಸಿದ್ದಾರೆ ಎಂದು ಶಿಡ್ಲಘಟ್ಟ ತಾಲ್ಲೂಕಿನ ಎನ್.ಹೊಸಹಳ್ಳಿಯ ಸಂದೀಪ್ ಕುಮಾರ್ ನಗರದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನನ್ನ ತಂಗಿ ಹೆರಿಗೆ ಸಲುವಾಗಿ ಮನೆಗೆ ಬಂದಿದ್ದಾರೆ. ಅವರ ನಂಬರ್‌ಗೆ ಸಂದೇಶವೊಂದು ಬಂದಿತ್ತು ಗೂಗಲ್ ರಿವ್ಯೂ ಮಾಡಿ ಹಣ ಗಳಿಸಬಹುದು ಎಂದು ಹೇಳಿದರು. ಅದಕ್ಕೆ ನಾನು ಮನೆಯಲ್ಲಿ ಬಿಡುವಿನ ಸಮಯದಲ್ಲಿ ಗೂಗಲ್ ರಿವ್ಯೂ ಮಾಡಿ ಹಣ ಸಂಪಾದನೆ ಮಾಡಬಹುದು ಎಂದು ಯೋಚಿಸಿದೆ.

ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಸಿದರು. ಟಾಸ್ಕ್‌ಗಳನ್ನು ಪೂರ್ಣಗೊಳಿಸಿದ ನಂತರ ಹಣ ಕ್ರೆಡಿಟ್ ಆಗುತ್ತಿದ್ದ ಬಗ್ಗೆ ಸ್ಕ್ರೀನ್ ಶಾಟ್‌ಗಳನ್ನು ಆ ಗುಂಪಿನಲ್ಲಿ ಹಾಕುತ್ತಿದ್ದರು. ನಾನು ಇದನ್ನು ನಂಬಿದೆ. ಮೊದಲಿಗೆ ನನ್ನ ತಂಗಿಯ
ಬ್ಯಾಂಕ್ ಖಾತೆಯಿಂದ ₹ 1 ಸಾವಿರ ಕಳುಹಿಸಿದೆ.

ಗೂಗಲ್ ರಿವ್ಯೂ  ಮಾಡಿ ಸ್ಕ್ರೀನ್‌ಶಾಟ್‌ಗಳನ್ನು ಹಾಕಿದ ನಂತರ ನನ್ನ ಖಾತೆಗೆ ಅವರು ₹ 1,300 ಕ್ರೆಡಿಟ್ ಮಾಡಿದರು. ನಂತರ ವಿವಿಧ ಖಾತೆಗಳಿಗೆ ಒಟ್ಟು ₹ 23.32 ಲಕ್ಷ ಹೂಡಿಕೆ ಮಾಡಿದೆ. ಹೀಗೆ ಆನ್‌ಲೈನ್ ವಂಚಕರು ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT