ಬುಧವಾರ, ಮೇ 18, 2022
23 °C

5 ಕಿ.ಮೀ. ಒಳಗೆ ಸಿಲಿಂಡರ್ ಉಚಿತ ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಸರ್ಕಾರದ ಆದೇಶದಂತೆ 5 ಕಿಲೋಮೀಟರ್ ವ್ಯಾಪ್ತಿಯವರೆಗೂ ಅಡುಗೆ ಅನಿಲ ಸಿಲಿಂಡರ್ ಸರಬರಾಜು ಶುಲ್ಕ ನೀಡುವ ಅಗತ್ಯವಿಲ್ಲ. ಈ ವ್ಯಾಪ್ತಿಯ ನಂತರ ಒಂದು ಸಿಲಿಂಡರ್ ಸರಬರಾಜು ಮಾಡಲು ಪ್ರತಿ ಕಿಲೋಮೀಟರ್‌ಗೆ ₹ 1.60ನಂತೆ ಪಾವತಿಸಬೇಕಿದೆ.

ಗ್ರಾಹಕರ ಮನೆಗೆ ಗ್ಯಾಸ್ ಸಿಲಿಂಡರ್ ತಲುಪಿಸುವುದು ಅಡುಗೆ ಅನಿಲ ವಿತರಕರ ಜವಾಬ್ದಾರಿ. ಗ್ರಾಹಕರ ಮನೆಯು ಯಾವುದೇ ಮಹಡಿಯಲ್ಲಿದ್ದರೂ ಉಚಿತವಾಗಿ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡಬೇಕಿದೆ. ಸಿಲಿಂಡರ್ ತಂದು ಕೊಡುವ ವ್ಯಕ್ತಿಯು ಬಿಲ್‍ಗಿಂತಲೂ ಹೆಚ್ಚಿನ ಹಣ ಕೇಳಿದರೆ ಗ್ರಾಹಕರು ನಿರಾಕರಿಸಬೇಕು. ಇದು ಎಲ್ಲಾ ಗ್ಯಾಸ್ ಕಂಪನಿಗಳ ಗ್ರಾಹಕರಿಗೂ ಅನ್ವಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್‌. ಲತಾ ತಿಳಿಸಿದ್ದಾರೆ.

ಬಿಲ್‍ಗಿಂತಲೂ ಹೆಚ್ಚಿನ ಹಣ ಪಾವತಿಸಲು ಒತ್ತಾಯ ಮಾಡಿದರೆ ಸಂಬಂಧಪಟ್ಟ ಗ್ಯಾಸ್ ಏಜೆನ್ಸಿ, ತಾಲ್ಲೂಕು ಕಚೇರಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ದೂರು ನೀಡಬಹುದು ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು