ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 90 ಮದ್ಯದಂಗಡಿ ಆರಂಭ

ನಗರ ಪ್ರದೇಶಗಳಲ್ಲಿ 38 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 52 ವೈನ್‌ಶಾಪ್‌ಗಳ ವಹಿವಾಟು
Last Updated 3 ಮೇ 2020, 15:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸುಮಾರು ಒಂದೂವರೆ ತಿಂಗಳಿಂದ ಲಾಕ್‌ಡೌನ್‌ನಿಂದಾಗಿ ಮದ್ಯದಂಗಡಿಗಳು, ಬಾರ್‌ಗಳು ಬಾಗಿಲು ಮುಚ್ಚಿದ ಕಾರಣಕ್ಕೆ ಮದ್ಯಕ್ಕಾಗಿ ಚಡಪಡಿಸುತ್ತಿದ್ದ ಮದ್ಯ ಪ್ರಿಯರಿಗೆ ಸೋಮವಾರ ಆಯ್ದ ಮದ್ಯದಂಗಡಿಗಳಲ್ಲಿ ಮದ್ಯ ದೊರೆಯಲಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋಮವಾರದಿಂದ (ಮೇ 4) ಮದ್ಯ ಮಾರಾಟಕ್ಕೆ ಷರತ್ತು ಬದ್ಧ ಅವಕಾಶ ನೀಡಿದ್ದು, ಜಿಲ್ಲೆಯಲ್ಲಿ ಇಂದಿನಿಂದ 90 ಮದ್ಯದಂಗಡಿಗಳು ಬಾಗಿಲು ತೆರೆದು ವಹಿವಾಟು ಆರಂಭಿಸಲಿವೆ.

ಜಿಲ್ಲೆಯಲ್ಲಿ 69 ಸಿಎಲ್‌–2( ಚಿಲ್ಲರೆ ಮದ್ಯದಂಗಡಿಗಳು– ವೈನ್‌ಶಾಪ್‌ ಹಾಗೂ ಎಂ.ಆರ್.ಪಿ ಮದ್ಯದಂಗಡಿ) ಮತ್ತು 21 ಸಿಎಲ್‌–11ಸಿ (ಎಂಎಸ್ಐಎಲ್) ಸೇರಿದಂತೆ ಒಟ್ಟು 90 ಮದ್ಯದಂಗಡಿಯಲ್ಲಿ ಇಂದಿನಿಂದ ಮದ್ಯ ದೊರೆಯಲಿದೆ.

ಜಿಲ್ಲೆಯ 69 ಸಿಎಲ್‌–2 ಮದ್ಯದಂಗಡಿಗಳ ಪೈಕಿ 32 ನಗರ, ಪಟ್ಟಣ ಪ್ರದೇಶಗಳಲ್ಲಿ ಮತ್ತು 37 ಗ್ರಾಮೀಣ ಪ್ರದೇಶಗಳಲ್ಲಿ ವಹಿವಾಟು ನಡೆಸಲಿವೆ. ಅದೇ ರೀತಿ ಎಂಎಸ್ಐಎಲ್‌ನ 21 ಮಳಿಗೆಗಳ ಪೈಕಿ 6 ನಗರ ಪ್ರದೇಶಗಳಲ್ಲಿ, 15 ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾರಂಭ ಮಾಡಲಿವೆ.

ಸರ್ಕಾರ ಕೊರೊನಾ ವೈರಾಣು ಸೋಂಕು ಕಾಣಿಸಿಕೊಂಡಿರುವ ‘ಕಂಟೈನ್ಮೆಂಟ್‌ ಝೋನ್‌’ ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ನಗರದ ನಾಲ್ಕು ವಾರ್ಡ್‌ಗಳನ್ನು ಮಾತ್ರ ‘ಕಂಟೈನ್ಮೆಂಟ್‌ ಝೋನ್‌’ ಎಂದು ಗುರುತಿಸಲಾಗಿದೆ. ಹೀಗಾಗಿ, ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಡೆಯಲಿದೆ.

ಸಾಮಾನ್ಯವಾಗಿ ಫೆಬ್ರುವರಿಯಿಂದ ಮೇ ತನಕ ಬಿಯರ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಬಿಸಿಲ ಝಳಕ್ಕಾಗಿ ಬಿಯರ್ ಸೇವಿಸುವವರ ಸಂಖ್ಯೆ ಹೆಚ್ಚಿದೆ. ಜನವರಿಯಲ್ಲಿ ತಯಾರಾದ ಬಿಯರ್‌ಗಳು ಜೂನ್ ತಿಂಗಳೊಳಗೆ ಮಾರಾಟಗೊಳ್ಳಬೇಕು. ಹೀಗಾಗಿ, ಮಾರಾಟಕ್ಕೆ ಅವಕಾಶ ನೀಡಿರುವುದು ಮದ್ಯ ವ್ಯಾಪಾರಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT