‘ಪರಿಸರಕ್ಕೆ ಹಾನಿ; ತಳ ಸಮುದಾಯಕ್ಕೆ ಪೆಟ್ಟು’
ಅತಿವೃಷ್ಟಿ ಅನಾವೃಷ್ಟಿ ಸಂಭವಿಸಿದಾಗ ಹಾಗೂ ಪರಿಸರಕ್ಕೆ ಹಾನಿಯಾದ ವೇಳೆ ಮೊದಲು ಬಲಿಪಶು ಆಗುವುದು ಬಡವರು ಮತ್ತು ತಳಸಮುದಾಯಗಳು ಎಂದು ಕುಲಪತಿ ಪ್ರೊ.ರಮೇಶ್ ತಿಳಿಸಿದರು. ಈ ನಿಟ್ಟಿನಲ್ಲಿ ಸುಸ್ಥಿರ ಕಾರ್ಯಯೋಜನೆ ಹಾಕಿಕೊಂಡು ಬದುಕು ರೂಪಿಸಬೇಕು. ಪರಿಸರ ಉಳಿವಿಗೆ ‘ಅಪ್ಪಿಕೊ’ ಚಳವಳಿ ನಡೆದಿತ್ತು. ಅದೇ ರೀತಿಯಲ್ಲಿಯೇ ಪರಿಸರ ಉಳಿಸಲು ಚಳವಳಿಗಳು ನಡೆಯಬೇಕು ಎಂದು ಹೇಳಿದರು.