ವೆಂಕಟೇಶ್ವರನ ಹೆಸರಿನಲ್ಲಿ ರಾಜ್ಯಭಾರ
ಆವತಿ ನಾಡಪ್ರಭು ದೇವಣಾಪುರ (ಈಗಿನ ದೇವನಹಳ್ಳಿ) ರಾಜ್ಯವನ್ನು 1501ರಲ್ಲಿ ಸಣ್ಣಬೈರೇಗೌಡರಿಂದ ಪ್ರಾರಂಭವಾಗಿ 1749ರಲ್ಲಿ ಚಿಕ್ಕಪ್ಪಗೌಡರವರೆಗೆ ರಾಜ್ಯವನ್ನಾಳಿದ್ದಾರೆ. ಈ ವಂಶಸ್ಥರು ಅತೀವ ದೈವಭಕ್ತರು. ಇವರು ತಿರುಪತಿ ವೆಂಕಟೇಶ್ವರಸ್ವಾಮಿ ಆರಾಧಕರು ಮತ್ತು ತಿರುಪತಿ ವೆಂಕಟೇಶ್ವರನ ಹೆಸರಿನಲ್ಲಿ ರಾಜ್ಯಭಾರ ಮಾಡಿದ್ದಾರೆ. ಹಾಗೆಯೇ ಅನೇಕ ದಾನ ದತ್ತಿಗಳನ್ನು ಕೂಡ ದೇವರ ಹೆಸರಿನಲ್ಲಿ ನೀಡಿದ್ದಾರೆ.