ಚಿಂತಾಮಣಿ: ಪಹಲ್ಗಾಮ್ನಲ್ಲಿ ಭಾರತೀಯ ಮೇಲೆ ದಾಳಿ ನಡೆಸಿದ ಉಗ್ರರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಭಾರತ ಸೇನೆಯಿಂದ ಭಯೋತ್ಪಾದಕರಿಗೆ ಬುದ್ಧಿ ಕಲಿಸುವ ಕೆಲಸ ಆಗಿದೆ. ಇದು ಇಡೀ ದೇಶವೇ ಹೆಮ್ಮೆ ಪಡುವಂತಹ ಶುಭ ಗಳಿಗೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಹೇಳಿದರು.

ತಾಲ್ಲೂಕಿನ ಸೀಕಲ್ ಗ್ರಾಮಕ್ಕೆ ಬುಧವಾರ ಖಾಸಗಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳವಾರ ಮಧ್ಯರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶದ 9 ಕಡೆ ಉಗ್ರಗಾಮಿಗಳ ಅಡಗು ತಾಣಗಳ ಮೇಲೆ ದಾಳಿಯಾಗಿದೆ. ಉಗ್ರಗಾಮಿಗಳಿಗೆ ಯಾವುದೇ ಜಾತಿ, ಧರ್ಮವಿಲ್ಲ. ಇಡೀ ವಿಶ್ವಕ್ಕೆ ತೊಂದರೆ ಕೋಡುತ್ತಿರುವ ಉಗ್ರಗಾಮಿಗಳನ್ನು ಮಟ್ಟ ಹಾಕಬೇಕು. ಈ ಕೆಲಸ ಈಗ ಆರಂಭವಾಗಿದೆ. ಉಗ್ರಗಾಮಿಗಳು ಮತ್ತು ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕಲು ಸೈನ್ಯ ಕ್ರಮ ಕೈಗೊಂಡಿದೆ. ಭಾರತೀಯ ಯೋಧರು ಕಾರ್ಯಾಚರಣೆ ಆರಂಭಿಸಿದ್ದು, ಸಂಪೂರ್ಣ ನೆಲಸಮ ಮಾಡುತ್ತಾರೆ ಎಂದರು.

ಬುಧವಾರದಿಂದ 4 ದಿನಗಳ ಕೊನೆ ಹಂತದ ಬಿಜೆಪಿ ಜನಾಕ್ರೋಶ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ದೇಶದ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಒಟ್ಟಾಗಿರಬೇಕು. ಭಾರತದ ಯೋಧರಿಗೆ ದೈರ್ಯ ತುಂಬಲು ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಬೆಂಬಲ ನೀಡಬೇಕಾದ ಅನಿವಾರ್ಯತೆ ಇದೆ. ಈ ಹಿನ್ನಲೆಯಲ್ಲಿ ಜನಾಕ್ರೋಶ ಯಾತ್ರೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ಗೆ ಈಗಲಾದರೂ ಒಳ್ಳೆ ಬುದ್ಧಿ ಬಂದಿದ್ದು ಬೆಂಬಲ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸದಾ ಟೀಕೆ ಮಾಡುವುದಕ್ಕಿಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಎಲ್ಲ ಪಕ್ಷಗಳು ಕೇಂದ್ರ ಮತ್ತು ಸೈನ್ಯ ತೆಗೆದುಕೊಳ್ಳುವ ತೀರ್ಮಾನಗಳಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ತು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸೈನಿಕರ ಶ್ರಮಕ್ಕೆ ದೇಶದಲ್ಲಿ ಬೆಲೆ ಇದೆ. ಸರ್ಕಾರ ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಸೇನಾಧಿಕಾರಿಗಳು ಯಾವ ತೀರ್ಮಾನ ಬೇಕಾದರೂ ಸ್ಥಳದಲ್ಲೇ ತೆಗೆದುಕೊಳ್ಳಬಹುದು. ನಾಗರಿಕರಿಗೆ ಹೆಚ್ಚಿನ ತೊಂದರೆ ಆಗದಂತೆ ಉಗ್ರರ ನೆಲೆಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡಲಾಗುತ್ತಿದೆ. ಭಾರತೀಯ ಸೇನೆ ಈ ಕಾರ್ಯವನ್ನು ಪೂರ್ಣಗೊಳಿಸುತ್ತದೆ ಎಂದು ಹೇಳಿದರು.

ಪಾಕಿಸ್ತಾನಕ್ಕೆ ನಮ್ಮ ಮೇಲೆ ಯುದ್ಧ ಮಾಡುವ ಶಕ್ತಿ ಇಲ್ಲ. ಕದ್ದುಮುಚ್ಚಿ ಗುಂಡು ಹಾರಿಸಿ ಹೋಗುವ ಉಗ್ರಗಾಮಿಗಳಿದ್ದಾರೆ. ಜನ ಸಾಮಾನ್ಯರ ಮೇಲೆ ನಮಗೆ ಯಾವುದೇ ಕೋಪ ಇಲ್ಲ. ಅವರ ಬಗ್ಗೆ ಗೌರವಿದೆ. ದೇಶದಲ್ಲಿರುವ ಮುಸನ್ಮಾನ ಬಂಧುಗಳ ಬಗ್ಗೆ ಗೌರವಿದೆ ಎಂದರು.

ಮಾಜಿ ಸಂಸದ ಎಸ್ ಮುನಿಸ್ವಾಮಿ, ಮುಖಂಡರಾದ ಸೀಕಲ್ ರಾಮಚಂದ್ರಗೌಡ, ವೇಣುಗೋಪಾಲ್ ಮಾತನಾಡಿದರು. ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.