ನಾಲ್ಕು ತಿಂಗಳಾದರೂ ಈಡೇರದ ಬೇಡಿಕೆ
ಜಿಲ್ಲೆಯಲ್ಲಿನ ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜ.20ರಿಂದ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕು ಕಚೇರಿಗಳ ಎದುರು ಅನಿರ್ದಿಷ್ಟಾವಧಿ ಧರಣಿ ನಡೆದಿತ್ತು. ದಸಂಸ ಬೇಡಿಕೆಯ ಪಟ್ಟಿಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಭವನ ವಾಲ್ಮೀಕಿ ಭವನ ಮತ್ತು ಬಾಬೂ ಜಗಜೀವನ ರಾಂ ಭವನ ನಿರ್ಮಾಣವೂ ಸೇರಿತ್ತು. ಪ್ರತಿಭಟನ ಸ್ಥಳಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಎರಡು ತಿಂಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಎರಡು ತಿಂಗಳು ದಾಟಿದೆ. ಆದರೆ ಈ ಬೇಡಿಕೆಗಳಿಗೆ ಇಂದಿಗೂ ಪರಿಹಾರ ಸಾಧ್ಯವಾಗಿಲ್ಲ.