ಬಾಗೇಪಲ್ಲಿ: ತಾಲ್ಲೂಕು ಮಿನಿ ಕ್ರೀಡಾಂಗಣದಲ್ಲಿ ಪುರಸಭೆ ಕಾರ್ಯಾಲಯದಿಂದ ಶನಿವಾರ ಬಾಗೇಪಲ್ಲಿ ಸ್ಥಳೀಯ ಯೋಜನಾ ಪ್ರದೇಶಕ್ಕೆ ಜಿಐಎಸ್ ಆಧಾರಿತ ಮಹಾಯೋಜನೆ ತಯಾರಿಸುವ ಕಾರ್ಯಕ್ಕೆ ಪುರಸಭಾ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ಚಾಲನೆ ನೀಡಿದರು.

ಬೆಂಗಳೂರಿನ ಇನ್ಸ್ಪೈರ್ ಪ್ಲಾನಿಂಗ್ ಕನ್ಸಲ್ಟ್ ಸಹ ಸಂಸ್ಥಾಪಕ ಡಾ.ಗೌತಮ್ಕೋನಿಕರ್, ಜಿಐಎಸ್ನ ತಂತ್ರಜ್ಞ ಡಾ.ಎಂ.ವಿನಯ್, ಮೇಲ್ವಿಚಾರಕ ಸತೀಶ್ ಪುರಸಭಾ ವ್ಯಾಪ್ತಿಯ ಗಡಿ ಗುರುತಿಸುವ ಕಾರ್ಯ ಮಾಡಿದರು.

ಪುರಸಭಾ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ಮಾತನಾಡಿ, ಅನೇಕ ವರ್ಷಗಳಿಂದ ಉಪಗ್ರಹ ಆಧಾರಿತವಾಗಿ ಪುರಸಭಾ ವ್ಯಾಪ್ತಿಯ ನೀಲಿನಕ್ಷೆ ಸಮರ್ಪಕವಾಗಿ ಇರಲಿಲ್ಲ. ಇದೀಗ ಜಿಲ್ಲಾಡಳಿತದಿಂದ ಬಾಗೇಪಲ್ಲಿ ಪುರಸಭಾ ವ್ಯಾಪ್ತಿಯ ಗಡಿ ಗುರುತಿಸಲು ಹೈಟೆಕ್ ತಂತ್ರಜ್ಞಾನದ ಜಿಐಎಸ್ ಆಧಾರಿತ ಮಹಾಯೋಜನೆಯ ಸರ್ವೆ ಕಾರ್ಯ ಮಾಡಲಾಗಿದೆ. ಇದರಿಂದ ನಿವೇಶನ, ಮನೆ, ಅಂಗಡಿ, ಖಾಲಿ ಜಾಗಗಳ ಮಾಹಿತಿಯ ಗುರುತಿಸಲಾಗುವುದು. ನಿವೇಶನ, ಮನೆ ಮಾಲೀಕರ ಆಸ್ತಿಗಳ ದಾಖಲಾತಿಗಳು ಸಿಗಲಿದೆ. ಉಪಗ್ರಹ ಆಧಾರಿತದ ದಾಖಲೆಗಳು ಲಭ್ಯ ಆಗಲಿದೆ ಎಂದರು.

ಪುರಸಭಾ ಅಧಿಕಾರಿ ಕೃಷ್ಣಪ್ಪ, ಮಾಜಿ ಸದಸ್ಯ ಗಡ್ಡಂರಮೇಶ್, ಸಿಬ್ಬಂದಿ ರವಿ, ಗೂಳೂರುಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.