ಮಂಗಳವಾರ, ಅಕ್ಟೋಬರ್ 27, 2020
23 °C

ಚಿಕ್ಕಬಳ್ಳಾಪುರ: ತಾಂಡ್ರಮರದಹಳ್ಳಿ ಡೇರಿಯಲ್ಲಿ ಬಿಜೆಪಿ ಮೇಲುಗೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ತಾಲ್ಲೂಕಿನ ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂಡ್ರಮರದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 13 ಸ್ಥಾನಗಳ ಪೈಕಿ 10 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 10 ಅಭ್ಯರ್ಥಿಗಳು ಗೆಲುವು ಸಾಧಿಸಿದರು.

ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಿಗೆ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ನೂತನ ನಿರ್ದೇಶಕರಾಗಿ ಟಿ.ಪಿ‌ ಮುನಿರೆಡ್ಡಿ, ಲಕ್ಷ್ಮೀಪತಿ ಟಿ.ಪಿ, ಟಿ.ವಿ.ಕೃಷ್ಣಪ್ಪ, ವೆಂಕಟೇಶ್ ಎಸ್. ಟಿ.ಎನ್‌.ಚೆನ್ನಕೇಶವಪ್ಪ, ಟಿ.ಕೆ.ಮಂಜುನಾಥ, ಆರ್.ನಾಗರಾಜು, ಟಿ.ಜಿ.ದೇವರಾಜು ಟಿ.ಎನ್.ಶ್ರೀನಿವಾಸ್, ಮಂಜುಳ ಆಯ್ಕೆಯಾದರು.

ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಅವರು ತಾಂಡ್ರಮರದಹಳ್ಳಿ ಗ್ರಾಮದ ಮುಖಂಡರಾದ ದೇವರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್, ಆಟೋ ಮುನಿರಾಜು, ಕೆಂಪಣ್ಣ, ಮುನಿರಾಮಯ್ಯ, ನಾರಾಯಣಸ್ವಾಮಿ, ರಘು, ನಾರಾಯಣಸ್ವಾಮಿ, ಕಣಜೇನಹಳ್ಳಿ ಆನಂದ್ ಅವರು ನೂತನ ನಿರ್ದೇಶಕರನ್ನು ಅಭಿನಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.