ಚಿಕ್ಕಬಳ್ಳಾಪುರ: ಬಸ್ನಿಂದ ಕೆಳಗಿಳಿದು ಮತ್ತೆ ಬಸ್ ಏರುವಷ್ಟರಲ್ಲಿ ವ್ಯಕ್ತಿಯೊಬ್ಬರ ಬಳಿ ಇದ್ದ ₹ 55 ಲಕ್ಷ ಕಳ್ಳತನವಾಗಿರುವ ಪ್ರಕರಣ ತಾಲ್ಲೂಕಿನ ಅರೂರು ಗ್ರಾಮದ ಬಳಿಯ ಹೋಟೆಲ್ ಬಳಿ ಇತ್ತೀಚೆಗೆ ನಡೆದಿದೆ.

ಏನಿದು ಪ್ರಕರಣ: ಹೈದರಾಬಾದ್ನ ಕೆ.ವೆಂಕಟೇಶ್ ರಾವ್ ಅವರು ಬೆಂಗಳೂರಿನಲ್ಲಿದ್ದ ತಮ್ಮ ಮನೆ ಮಾರಾಟ ಮಾಡಿದ್ದರು. ಆಸ್ತಿ ಮಾರಾಟದಿಂದ ಬಂದ ₹ 55 ಲಕ್ಷವನ್ನು ತೆಗೆದುಕೊಂಡು ಬೆಂಗಳೂರಿನಿಂದ ಹೈದರಾಬಾದ್ಗೆ ಐಷಾರಾಮಿ ಕೆಎಸ್ಆರ್ಟಿಸಿ ಬಸ್ನಲ್ಲಿ ಹೊರಟಿದ್ದರು.

ಊಟಕ್ಕಾಗಿ ಅರೂರು ಬಳಿಯ ಹೋಟೆಲ್ ಬಳಿ ಬಸ್ ನಿಲುಗಡೆಯಾಗಿದೆ. ಎಲ್ಲರೂ ಊಟಕ್ಕೆ ಬಸ್ ಇಳಿದಿದ್ದಾರೆ. ಅದೇ ರೀತಿಯಲ್ಲಿ ವೆಂಕಟೇಶ್ ರಾವ್ ಸಹ ಬಸ್ ಇಳಿದಿದ್ದಾರೆ. ಹಣವಿದ್ದ ಬ್ಯಾಗ್ ಅನ್ನು ಬಸ್ನಲ್ಲಿಯೇ ಬಿಟ್ಟಿದ್ದಾರೆ.

‘ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಊಟ ತಿಂಡಿಗೆ ಹೋಗಿ’ ಎಂದು ಬಸ್ ಸಿಬ್ಬಂದಿ ತಿಳಿಸಿದ್ದಾರೆ. ಹೀಗಿದ್ದರೂ ಅವರು ಹಣವಿದ್ದ ಬ್ಯಾಗ್ ಅನ್ನು ಬಸ್ನಲ್ಲಿಯೇ ಬಿಟ್ಟು ಕೆಳಗೆ ಇಳಿದಿದ್ದಾರೆ.

ಬಸ್ನಲ್ಲಿದ್ದ ಕೆಲ ಪ್ರಯಾಣಿಕರನ್ನು ವಿಚಾರಿಸಿದಾಗ ಟಾಟಾ ಇಂಡಿಕಾ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಬ್ಯಾಗ್ ತೆಗೆದುಕೊಂಡು ಹೋಗಿರುವುದಾಗಿ ಮಾಹಿತಿ ನೀಡಿದ್ದಾರೆ. ಕಾರಿನಲ್ಲಿ ಬಂದ ವ್ಯಕ್ತಿ ನಕಲಿ ನಂಬರ್ ಪ್ಲೇಟ್ ಬಳಸಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಪೆರೇಸಂದ್ರ ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.