ಚೇಳೂರು: ಬೆಳೆಗಳಿಗೆ ಅವಶ್ಯಕವಾದ ಯೂರಿಯಾ ಗೊಬ್ಬರಗ ಸರಬರಾಜು ಮಾಡಬೇಕು ಎಂದು ತಾಲೂಕಿನ ಚಾಕವೇಲು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ರೈತರು ಆಗ್ರಹಿಸಿದರು.

ಚಾಕವೇಲು ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಯೂರಿಯಾ ಗೊಬ್ಬರಕ್ಕಾಗಿ ಅಂಗಡಿಯ ಮುಂದೆ ರೈತರು ಸಾಲುಗಟ್ಟಿ ನಿಂತರು. ಆದರೆ ಗೊಬ್ಬರದ ಕೊರತೆ ಎದುರಾಗಿದೆ.

ಸುಮಾರು ದಿನಗಳಿಂದ ಯೂರಿಯೂ ಇಲ್ಲ. ರಾಗಿ, ಶೇಂಗಾ, ಮುಸುಕಿನ ಜೋಳ ಮೊದಲಾದ ಬೆಳೆಗಳಿಗೆ ಬಿತ್ತನೆ ಮಾಡಲು ಯೂರಿಯಾ ಕೊರತೆ ಆಗಿದೆ ಎಂದು ಮರವಪಲ್ಲಿ ರೈತ ಎಂ.ಇ. ಮಂಜುನಾಥರೆಡ್ಡಿ ತಿಳಿಸಿದರು.

ಚಾಕವೇಲು, ಪುಲಗಲ್ ,ಸೋಮನಾಥಪುರ, ನಾರೇಮದ್ದೇಪಲ್ಲಿ, ಗ್ರಾಮಗಳಲ್ಲಿ ಯೂರಿಯಾ ಕೊರತೆ ಹೆಚ್ಚಾಗಿದೆ. ಕೃಷಿ ಅಧಿಕಾರಿಗಳು ಗ್ರಾಮೀಣ ಭಾಗಗಳಿಗೆ ಭೇಟಿ ನೀಡಬೇಕು. ಚಾಕವೇಲು ಗ್ರಾಮದಲ್ಲಿರುವ ರಸ ಗೊಬ್ಬರಗಳ ಅಂಗಡಿಗಳಲ್ಲಿಯೂ ಕೊರತೆಯಾಗಿದೆ. ಯೂರಿಯಾ ಸರಬರಾಜು ಮಾಡಬೇಕು ಎಂದು ರೈತರು ಮನವಿ ಮಾಡಿದರು.

ಚಾಕವೇಲು ಗ್ರಾಮದಲ್ಲಿ ಯೂರಿಯ ಕೊರತೆ ಇದೆ. ಹೆಚ್ಚಾಗಿ ಸರಬರಾಜು ಮಾಡಬೇಕಾಗಿದೆ. ರೈತರು ಬೆಳೆಗಳನ್ನ ನಂಬಿ ಜೀವನ ಮಾಡುತ್ತಿದ್ದಾರೆ ರಸ ಗೊಬ್ಬರಗಳು ಇಲ್ಲ ಎಂದರೆ ಹೇಗೆ? ಇದೇ ರೀತಿಯಲ್ಲಿ ಆದರೆ ಜಿಲ್ಲಾ ಜಂಟಿ ಕೃಷಿ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಂ.ಇ.ಮಂಜುನಾಥರೆಡ್ಡಿ ಎಚ್ಚರಿಸಿದರು.

ಈ ವರ್ಷ ಯೂರಿಯಾ ಕೊರತೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈಗಾಗಲೇ ಚೇಳೂರುಗೆ800 ಮೂಟೆ ಯೂರಿಯಾ ಬಂದಿತ್ತು. ಅದು ಖಾಲಿ ಆಗಿದೆ. ಸೋಮವಾರ 30 ಟನ್ ಯೂರಿಯಾ ಬರುತ್ತದೆ. ಎಲ್ಲಾ ಕಡೆ ಸರಬರಾಜು ಮಾಡಿಸುತ್ತೇವೆ. ಯೂರಿಯಾ ಬದಲು ನ್ಯಾನೋ ಯೂರಿಯಾ ಬೆಳೆಗಳಿಗೆ ಬಳಸಬಹುದು ಎಂದು ಬಾಗೇಪಲ್ಲಿ ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ.ಚೇಳೂರು: ಬೆಳೆಗಳಿಗೆ ಅವಶ್ಯಕವಾದ ಯೂರಿಯಾ ಗೊಬ್ಬರಗ ಸರಬರಾಜು ಮಾಡಬೇಕು ಎಂದು ತಾಲೂಕಿನ ಚಾಕವೇಲು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ರೈತರು ಆಗ್ರಹಿಸಿದರು.

ಈ ವರ್ಷ ಯೂರಿಯಾ ಕೊರತೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈಗಾಗಲೇ ಚೇಳೂರುಗೆ800 ಮೂಟೆ ಯೂರಿಯಾ ಬಂದಿತ್ತು. ಅದು ಖಾಲಿ ಆಗಿದೆ. ಸೋಮವಾರ 30 ಟನ್ ಯೂರಿಯಾ ಬರುತ್ತದೆ. ಎಲ್ಲಾ ಕಡೆ ಸರಬರಾಜು ಮಾಡಿಸುತ್ತೇವೆ. ಯೂರಿಯಾ ಬದಲು ನ್ಯಾನೋ ಯೂರಿಯಾ ಬೆಳೆಗಳಿಗೆ ಬಳಸಬಹುದು ಎಂದು ಬಾಗೇಪಲ್ಲಿ ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.