ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕಾಫ್ ಆಗಿ ಮತ್ತೆ ಲ್ಯಾಂಡ್ ಆದ ಪ್ರಸಂಗ ಸೋಮವಾರ ನಡೆಯಿತು.
ಚಿಕ್ಕಬಳ್ಳಾಪುರದ ಎಸ್‌ಜೆಸಿಐಟಿ ಕಾಲೇಜು ಆವರಣದ ಹೆಲಿಪ್ಯಾಡ್‌ಗೆ ಬಂದಿಳಿದ ಬೊಮ್ಮಾಯಿ ಅವರು ಸೂಲಾಲಪ್ಪನದಿಣ್ಣೆಯ ಕಾರ್ಯಕ್ರಮ ಪೂರ್ಣಗೊಳಿಸಿ ಅರೂರು ಬಳಿ ವೈದ್ಯಕೀಯ ಶಿಕ್ಷಣ ಕಾಲೇಜು ಉದ್ಘಾಟಿಸಲು ಕಾರಿನಲ್ಲಿ ತೆರಳಿದರು. ಅಲ್ಲಿಂದ ವಾಪಸ್ ಹೆಲಿಪ್ಯಾಡ್‌ಗೆ ಬಂದರು.
ಈ ವೇಳೆ ಹೆಲಿಕಾಪ್ಟರ್ ಟೇಕಾಫ್ ಆಗುವ ವೇಳೆ ದೊಡ್ಡ ಪ್ರಮಾಣದಲ್ಲಿ ದೂಳು ಎದ್ದಿತ್ತು. ಹಾಗಾಗಿ ಹೆಲಿಕಾಪ್ಟರ್ ಮತ್ತೆ ಲ್ಯಾಂಡ್ ಆಗಬೇಕಾಯಿತು. ಈ ವೇಳೆ ಹೆಲಿಕಾಪ್ಟರ್‌ನಲ್ಲಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ಆಯುಕ್ತ ನವೀನ್ ರಾಜ್ ಸಿಂಗ್ ಕೆಳಕ್ಕಿಳಿದರು. ನಂತರ ಹೆಲಿಕಾಪ್ಟರ್ ಆಗಸಕ್ಕೆ ಹಾರಿತು.
ನಿಗದಿಗಿಂದ ಹೆಚ್ಚು ಜನರು ಪ್ರಯಾಣಿಸಿದ ಕಾರಣ ಮತ್ತೆ ಹೆಲಿಕಾಪ್ಟರ್ ಲ್ಯಾಂಡ್ ಆಯಿತು ಎನ್ನಲಾಗುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.