ಚಿಂತಾಮಣಿ: ನಗರದ ಸರ್ಕಾರಿ ಪಾಲಿಟೆಕ್ನಿಕ್ಗೆ 75 ವರ್ಷ ತುಂದಿದೆ. ಸಂಸ್ಥೆಯನ್ನು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಆಧುನೀಕರಣಗೊಳಿಸಿ ಮಾದರಿ ಪಾಲಿಟೆಕ್ನಿಕ್ ಆಗಿ ರೂಪುಗೊಳಿಸಲು ₹75 ಕೋಟಿ ಮಂಜೂರು ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ಸರ್ಕಾರಿ ಪಾಲಿಟೆಕ್ನಿಕ್ ಮುಕ್ತಾಯವಾಗಿರುವ ಕಟ್ಟಡದ ವಿವಿಧ ಭಾಗಗಳನ್ನು ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಭಾನುವಾರ ವೀಕ್ಷಿಸಿ ಮಾತನಾಡಿದರು.

ಮೊದನೇ ಹಂತದಲ್ಲಿ ₹10 ಕೋಟಿ, ಎರಡನೇ ಹಂತದಲ್ಲಿ ₹15 ಕೋಟಿ, ಮೂರನೇ ಹಂತದಲ್ಲಿ ₹50 ಕೋಟಿ ಅನುದಾನ ನೀಡಲಾಗಿದೆ. ತರಗತಿ ಕೊಠಡಿಗಳಲ್ಲಿ ಪೀಠೋಪಕರಣ, ಕುರ್ಚಿ, ಬೀರುಗಳ ಮತ್ತಿತರ ಪರಿಕರ ಹಳೆಯದಾಗಿವೆ. ಅವುಗಳನ್ನು ಸರಿಪಡಿಸಲು ಇನ್ನೂ ₹5-6 ಕೋಟಿ ಅನುದಾನದ ಅಗತ್ಯವಿದೆ ಎಂದರು.

ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್’ ತೆರೆಯಲಾಗುವುದು. ಸ್ಲೈಡರ್ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇನ್ನೂ ಹಲವಾರು ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ರಾಜ್ಯದಲ್ಲೇ ಮಾದರಿ ಪಾಲಿಟೆಕ್ನಿಕ್ ಆಗಿ ರೂಪಿಸುವುದು ಗುರಿಯಾಗಿದೆ ಎಂದರು.

ಈಗಾಗಲೇ ಕಾಮಗಾರಿ ಮುಕ್ತಾಯವಾಗಿ ಹಸ್ತಾಂತರಿಸುವ ಕಟ್ಟಡದ ನಿರ್ವಹಣೆಯನ್ನು ನೋಡಿದಾಗ ಬೇಸರವಾಗುತ್ತದೆ. ಇಂದಿನ ಕಾಲಕ್ಕೆ ವ್ಯವಸ್ಥೆ ಮಾಡಿಕೊಟ್ಟರೂ ಸಹ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಪ್ರಾಂಶುಪಾಲರಿಂದ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಹ ಇದು ನಮ್ಮದು ಎಂಬ ಬದ್ಧತೆ ಇರಬೇಕು. ಸರ್ಕಾರಿ ಸಂಸ್ಥೆಗಳ ನಿರ್ವಹಣೆಯನ್ನು ಆಡಳಿತವರ್ಗ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸರ್ಕಾರಿ ಸಂಸ್ಥೆ ಎಂದು ತಾತ್ಸಾರ, ಬೇಜವಾಬ್ದಾರಿ ತೋರಿಸಬಾರದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.