150 ವರ್ಷಕ್ಕೂ ಹೆಚ್ಚಿನ ಇತಿಹಾಸವುಳ್ಳ ಅಂಚೆ ಕಚೇರಿಗೆ ತಾಲ್ಲೂಕು ಕೇಂದ್ರದಲ್ಲಿ ಸ್ವಂತ ಕಟ್ಟಡವಿಲ್ಲ ಎಂಬುದು ಸರ್ಕಾರ ತಲೆತಗ್ಗಿಸುವ ವಿಷಯ. ಎಲ್ಲ ವರ್ಗಗಳ ಸಾರ್ವಜನಿಕರಿಗೆ ಅಗತ್ಯವಿರುವ ಅಂಚೆ ಕಚೇರಿಗೆ ಸೂಕ್ತ ಕಟ್ಟಡ ನಿರ್ಮಿಸಬೇಕು. ಕೇಂದ್ರ ಈ ಬಗ್ಗೆ ಕ್ಷೇತ್ರದ ಸಂಸದರು ಈ ಬಗ್ಗೆ ಗಮನ ಹರಿಸಬೇಕು.
– ಲಕ್ಷ್ಮಿನಾರಾಯಣರೆಡ್ಡಿ, ನಾಗರಿಕ ಚಿಂತಾಮಣಿ
ನಗರದ ಅಂಚೆ ಕಚೇರಿಗೆ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯ ಯಾಜ್ಞವಲ್ಕ್ಯ ದೇವಾಲಯದ ಸಮೀಪ ನಿವೇಶನವಿದೆ. ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು ಟೆಂಡರ್ ಮತ್ತಿತರ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಶೀಘ್ರದಲ್ಲೇ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.