ಚಿಂತಾಮಣಿ: ತಾಲ್ಲೂಕಿನ ಚಿನ್ನಸಂದ್ರ-ನಿಡುಗುರ್ಕಿ ರಸ್ತೆ ಸೂಲದೇನಹಳ್ಳಿ ಗೇಟ್ ಬಳಿ ಸೋಮವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿದ ಇಬ್ಬರು ವ್ಯಕ್ತಿಗಳು ಚಾಕು ತೋರಿಸಿ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ನಿಡಗುರ್ಕಿಯಲ್ಲಿ ವಾಸವಾಗಿರುವ ಆರ್ಗಾನಿಕ್ ಸಂಸ್ಥೆ ವ್ಯಾಪಾರಿ ರಂಗಸ್ವಾಮಿ ಬೈಕ್ ಕಳೆದುಕೊಂಡವರು. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಹೋಬಳಿ ಅರಬಿಳಚ್ಚಿ ಗ್ರಾಮದವರು. ಅರ್ಗಾಮಿಕ್ ಸಂಸ್ಥೆ ಉದ್ಯೋಗಿಯಾಗಿದ್ದು ಕಳೆದ 5 ತಿಂಗಳಿನಿಂದ ನಿಡಗುರ್ಕಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಅರ್ಗಾನಿಕ್ ಕಂಪನಿ ಗೊಬ್ಬರ ಮತ್ತು ಔಷಧಿಯನ್ನು ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಮಾಲೂರು ತಾಲ್ಲೂಕು ರೈತರಿಗೆ ಮಾರಾಟ ಮಾಡುವುದು ಅವರ ಉದ್ಯೋಗ. ಸೋಮವಾರ ಶ್ರೀನಿವಾಸಪುರದಲ್ಲಿ ವ್ಯಾಪಾರ ಮುಗಿಸಿಕೊಂಡು ಬೈಕ್ನಲ್ಲಿ ಗ್ರಾಮಕ್ಕೆ ಹೋಗುತ್ತಿದ್ದರು. ರಾತ್ರಿ ಸುಮಾರು 7-30 ಸುಮಾರಿನಲ್ಲಿ ಅಡ್ಡಗಟ್ಟಿ ಬೈಕ್ ಕಿತ್ತುಕೊಂಡು ಹೋಗಿದ್ದು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.