ಚಿಂತಾಮಣಿ: ಬೇಸಿಗೆಯ ಮುನ್ನವೇ ಬಿಸಿಲಿನ ತಾಪ ಸುಡಿತ್ತಿದ್ದು, ಜನ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಕಲಬೆರಿಕೆ ಇಲ್ಲದೆ ಅಮೃತ ಎನ್ನಿಸಿಕೊಳ್ಳುವ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಎಳನೀರಿನ ದರ ಏರಿಕೆಯಾಗಿದೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಳನೀರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ವರ್ಷ ಫೆಬ್ರವರಿ ತಿಂಗಳಲ್ಲೆ ಸೂರ್ಯ ತನ್ನ ಪ್ರಕರವನ್ನು ಹೆಚ್ಚಿಸಿಕೊಂಡು ಜನರ ನೆತ್ತಿ ಸುಡುತ್ತಿದ್ದಾನೆ. ಸೂರ್ಯನ ತಾಪಕ್ಕೆ ತುತ್ತಾದ ಜನತೆ ಬಿಸಿಲಿನಿಂದ ಬಳಲಿ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಎಳನೀರಿನ ಬೆಲೆ ಕೇಳಿದ ಜನರು ಹೌಹಾರಿ ಬೆವರುತ್ತಿದ್ದಾರೆ.

₹25 ರಿಂದ₹30 ಇದ್ದ ಒಂದು ಎಳನೀರಿನ ಬೆಲೆ ಏಕಾಏಕಿ ₹40ರಿಂದ₹50 ಗೆ ಏರಿಕೆಯಾಗಿದ. ಬಿಸಿಲಿನ ತಾಪಕ್ಕೆ ದೇಹ ತಂಪು ಮಾಡಿಕೊಳ್ಳಲು ಹೋಗುವವರು ಎಳನೀರು ಬೆಲೆ ಕೇಳುತ್ತಿದ್ದಂತೆ ಜೇಬು ಬಿಸಿಯಾಗುತ್ತಿದೆ.

ಬೆಲೆ ಹೆಚ್ಚಾದರೂ ಪಾರವಾಗಿಲ್ಲ. ಆರೋಗ್ಯಕ್ಕೆ ಒಳ್ಳೆಯದೆಂದು ಜನರು ವಿಧಿ ಇಲ್ಲದೆ ಎಳನೀರು ಸೇವಿಸುತ್ತಿದ್ದಾರೆ. ಕಳೆದ ವರ್ಷ ಇದೆ ಸಮಯದಲ್ಲಿ ₹20ರಿಂದ ₹25 ಗೆ ಮಾರಾಟವಾಗುತ್ತಿತ್ತು.

ಗಾತ್ರಕ್ಕೆ ತಕ್ಕಂತೆ ಮೂರು ವಿಭಾಗ ಮಾಡುತ್ತಾರೆ. ಚಿಕ್ಕ ಗಾತ್ರಕ್ಕೆ ₹30, ಮಧ್ಯಮ ಗಾತ್ರಕ್ಕೆ ₹40, ದೊಡ್ಡ ಗಾತ್ರಕ್ಕೆ ₹50 ರಿಂದ ₹60ಗೆ ಮಾರಾಟ ಮಾಡುತ್ತಿದ್ದಾರೆ. ಬೇಸಿಗೆ ಆರಂಭದಲ್ಲಿಯೇ ಹೀಗಾದರೆ ಇನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎಷ್ಟಾಗುತ್ತೋ ಎನ್ನುತ್ತಿದ್ದಾರೆ ಜನ.

ಕುಗ್ಗಿದ ಪೂರೈಕೆ ಹೆಚ್ಚಿದ ಬೇಡಿಕೆ

ಪ್ರಸಕ್ತ ವರ್ಷದಲ್ಲಿ ಇಳುವರಿ ಕಡಿಮೆ ಆಗಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಹೆಚ್ಚು ಮಾರಾಟವಾಗುವ ಪಾನೀಯ ಎಂದರೆ ಎಳೆನೀರು. ಮಂಡ್ಯ ಮದ್ದೂರು ಚಿತ್ರದುರ್ಗದಿಂದ ಪ್ರತಿ ವರ್ಷ ಈ ಭಾಗಕ್ಕೆ ಎಳನೀರು ಪೂರೈಕೆ ಆಗುತ್ತಿತ್ತು. ಅಲ್ಲಿಯೂ ಇಳುವರಿ ಕಡಿಮೆಯಾಗಿರುವುದರಿಂದ ಪೂರೈಕೆ ಕಡಿಮೆಯಾಗಿದೆ ಎನ್ನುತ್ತಾರೆ ಕೈವಾರದ ಎಳನೀರು ವ್ಯಾಪಾರಿ ರಂಗಣ್ಣ. ರೈತರಿಗೆ ಲಾಭವಿಲ್ಲ ಮಾರುಕಟ್ಟೆಯಲ್ಲಿ ಎಳೆನೀರು ಬೆಲೆ ಹೆಚ್ಚಾಗಿದ್ದರೂ ರೈತರಿಗೆ ಸಿಗೋದು ಒಂದು ಎಳೆ ನೀರಿಗೆ ₹20 ಮಾತ್ರ. ವ್ಯಾಪಾರಸ್ಥರು ದಲ್ಲಾಳಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೂ ಲಾಭವಿಲ್ಲ ಗ್ರಾಹಕರಿಗೂ ಲಾಭವಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಆರೋಗ್ಯಕ್ಕೆ ಪ್ರಯೋಜನೆ

ಚಿಕ್ಕವರಿಂದ ವೃದ್ಧರವರೆಗೂ ಎಲ್ಲರೂ ಇಷ್ಟಪಡುವ ತಂಪು ಪಾನೀಯ ಎಂದರೆ ಎಳನೀರು. ಅದರಲ್ಲೂ ರೋಗಿಗಳು ವೈದ್ಯರ ಸಲಹೆ ಮೇರೆಗೆ ಹೆಚ್ಚಾಗಿ ಎಳನೀರು ಸೇವಿಸುತ್ತಾರೆ. ಎಳನೀರಿನಲ್ಲಿ ಪೊಟ್ಯಾಸಿಯಮ್ ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ. ರಕ್ತದೊತ್ತಡ ಸುಧಾರಿಸಿ ಸ್ನಾಯುಸೆಳೆತ ಮಾಯವಾಗುವಂತೆ ಮಾಡುತ್ತದೆ. ಫೈಬರ್ ಅಂಶವಿರುವುದರಿಂದ ಜೀರ್ಣಕ್ರಿಯೆ ಹೆಚ್ಚಿಸಿ ಮಲಬದ್ಧತೆ ತಡೆಯಲು ಸಹಾಯ ಮಾಡುತ್ತದೆ. ಎಳನೀರು ಕಡಿಮೆ ಕ್ಯಾಲೋರಿ ಹೊಂದಿದೆ. ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.