ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಪ್ಲಾಸ್ಟಿಕ್‌ ವಿರುದ್ಧ ಚಿಂತಾಮಣಿ ಸಮರ

Published : 23 ಜೂನ್ 2025, 7:02 IST
Last Updated : 23 ಜೂನ್ 2025, 7:02 IST
ಫಾಲೋ ಮಾಡಿ
Comments
ಸುತ್ತಮುತ್ತಲಿನ ಪರಿಸರವನ್ನು ನಾಗರಿಕ ಸಮಾಜ ಗಂಭೀರವಾಗಿ ಪರಿಗಣಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಹೊರಬರುವ ಸಂಕಲ್ಪ ಕೈಗೊಳ್ಳಬೇಕು. ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ಕಾನೂನು ಜತೆಗೆ ಸಾರ್ವಜನಿಕರ ಸಹಕಾರವು ಅಗತ್ಯ. 
ಡಾ.ಎಂ.ಸಿ.ಸುಧಾಕರ್ ಸಚಿವ
ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಜನರ ಸಹಕಾರ ಬೇಕು. ಪ್ಲಾಸ್ಟಿಕ್ ಮುಕ್ತ ಸಮಾಜ ಮನೆಯಿಂದಲೇ ಆರಂಭವಾಗಬೇಕು.  ಸದಾ ಖಾದಿ ಬಟ್ಟೆಯ ಕೈಚೀಲ ಇರಬೇಕು. ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಹಾಗೂ ಹಸಿರು ಚಿಂತಾಮಣಿ ಮಾಡಲು ನಗರಸಭೆಯ ಸಿಬ್ಬಂದಿ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ. ನಗರದ ರಸ್ತೆಗಳ ಇಕ್ಕೆಲ್ಲಗಳಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ.
ಜಿ.ಎನ್.ಚಲಪತಿ ಪೌರಾಯುಕ್ತ
ಯಿಂದಲೇ ಆರಂಭವಾಗಲಿ *** ನಾಗರಿಕರ ಸಹಕಾರ ಅಗತ್ಯ ಆರೋಗ್ಯಕರ ಸಮಾಜಕ್ಕಾಗಿ ನಗರಸಭೆ ಉತ್ತಮ ಕಾರ್ಯಕ್ರಮ ಕೈಗೊಂಡಿದೆ. ಪ್ಲಾಸ್ಟಿಕ್ ಬಳಕೆ ಮುಂದುವರೆಸಿದರೆ ಮುಂದಿನ ಪೀಳಿಗೆ ಬದುಕುವುದೇ ದುಸ್ತರವಾಗುತ್ತದೆ. ಪ್ಲಾಸ್ಟಿಕ್ ಮುಕ್ತ ನಗರಕ್ಕೆ ನಾಗರಿಕರು ಕೈಜೋಡಿಸಬೇಕು. ಎಷ್ಟೇ ಕಷ್ಟ ತೊಂದರೆ ಆದರೂ ಸಹ ಪ್ಲಾಸ್ಟಿಕ್ ಬಳಕೆ ಮಾಡದಿರಲು ಪಣತೊಡಬೇಕು.
ಸಿ.ಎ.ರಮೇಶ್ ನಾಗರಿಕ
ಶಾಲೆ–ಕಾಲೇಜುಗಳಲ್ಲಿ ಅರಿವು ಪ್ಲಾಸ್ಟಿಕ್ ರಹಿತ ಜೀವನವನ್ನು ರೂಡಿಸಿಕೊಳ್ಳಬೇಕು. ಪ್ಲಾಸ್ಟಿಕ್ ನಿಂದ ಉಂಟಾಗುವ ಹಾನಿಯ ಬಗ್ಗೆ ಶಾಲಾ–ಕಾಲೇಜುಗಳಲ್ಲಿ ಗಂಭೀರವಾಗಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕು.
ಅಶ್ವತ್ಥಮ್ಮ ನಿವೃತ್ತ ಪ್ರಾಂಶುಪಾಲೆ
ಪರಿಸರ ಜಾಗೃತಿ ಸಭೆ ನಡೆಸಿದರೆ ಯಾವ ಅರ್ಥವೂ ಇಲ್ಲ. ಜನರು ಸ್ವತ: ಪರಿಸರ ಕಾಪಾಡುವ ಪ್ರತಿಜ್ಞೆ ಕೈಗೊಳ್ಳಬೇಕು. ಮನೆ ಹೊರಗಡೆ ಎಲ್ಲಿಯೂ ಪ್ಲಾಸ್ಟಿಕ್ ಬಳಸಬಾರದು. ಮನೆಯಿಂದ ಹೊರಗಡೆ ಹೊರಟಾಗ ಪರಿಸರಸ್ನೇಹಿ ಕೈಚೀಲ ತೆಗೆದುಕೊಂಡು ಹೋಗಬೇಕು. ಮನೆ ಮಾರುಕಟ್ಟೆ ಮದುವೆ ಮತ್ತಿತರ ಸಮಾರಂಭ ಸೇರಿದಂತೆ ಎಲ್ಲಿಯೂ ಪ್ಲಾಸ್ಟಿಕ್ ಬಳಸಬಾರದು. ಇತರರಿಗೂ ಜಾಗೃತಿ ಮೂಡಿಸಬೇಕು.
ಪಾಪಣ್ಣ ಮಾಜಿ ಅಧ್ಯಕ್ಷ ಕಸಾಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT