ಮುಂಬೈ: ಮುಂಬರುವ ಏಷ್ಯಾ ಕಪ್ ಟಿ20 ಟೂರ್ನಿಗಾಗಿ 15 ಸದಸ್ಯರ ಬಳಗದ ಟೀಮ್ ಇಂಡಿಯಾವನ್ನು ಬಿಸಿಸಿಐ ಪ್ರಕಟಿಸಿದೆ. ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದು, ಶುಭಮನ್ ಗಿಲ್ ಉಪನಾಯಕರಾಗಲಿದ್ದಾರೆ.

ಈ ಮಧ್ಯೆ ಕೆಲವು ಪ್ರಮುಖ ಆಟಗಾರರು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ. ಇವರಲ್ಲಿ ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಕೆ.ಎಲ್. ರಾಹುಲ್ ಹಾಗೂ ರವಿ ಬಿಷ್ಣೋಯಿ ಪ್ರಮುಖರಾಗಿದ್ದಾರೆ.

ಈ ಬಾರಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ನತ್ತ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್, 50.33ರ ಸರಾಸರಿಯಲ್ಲಿ (175ರ ಸ್ಟ್ರೈಕ್ರೇಟ್) 604 ರನ್ ಪೇರಿಸಿದ್ದರು. ಆದರೂ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

'ಬಹಳಷ್ಟು ಉತ್ತಮ ಆಟಗಾರರು ಇದ್ದಾಗ ಆಯ್ಕೆ ಪ್ರಕ್ರಿಯೆ ತಲೆನೋವಿನ ಸಂಗತಿಯಾಗುತ್ತದೆ. ಉತ್ತಮರಲ್ಲಿಯೇ ಶ್ರೇಷ್ಠರನ್ನು ಹುಡುಕುವುದು ಸುಲಭವಲ್ಲ' ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರಕರ್ ಸ್ಪಷ್ಟನೆ ನೀಡಿದ್ದಾರೆ.

ಅತ್ತ ಯಶಸ್ವಿ ಜೈಸ್ವಾಲ್, ಐಪಿಎಲ್ನಲ್ಲಿ 43ರ ಸರಾಸರಿಯಲ್ಲಿ (159.71ರ ಸ್ಟ್ರೈಕ್ ರೇಟ್) 559 ರನ್ ಪೇರಿಸಿದ್ದರು. ಆದರೂ ಆರಂಭಿಕ ಸ್ಥಾನದಲ್ಲಿ ಗುರುತಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

'ಜೈಸ್ವಾಲ್ ಅವರು ತಂಡಕ್ಕೆ ಆಯ್ಕೆಯಾಗದಿರುವುದು ದುರದೃಷ್ಟಕರ. ಅವರು ಇನ್ನೂ ಸ್ವಲ್ಪ ಕಾಲ ಕಾಯ ಬೇಕಾಗಬಹುದು' ಎಂದೂ ಅಗರಕರ್ ಹೇಳಿದರು.

ಐಪಿಎಲ್ ಸೇರಿದಂತೆ ಇತ್ತೀಚೆಗಿನ ಇಂಗ್ಲೆಂಡ್ ಸರಣಿಯಲ್ಲಿ ಗಮನಾರ್ಹ ಆಲ್ರೌಂಡ್ ಪ್ರದರ್ಶನ ನೀಡಿದ್ದ ವಾಷಿಂಗ್ಟನ್ ಸುಂದರ್ ಅವರನ್ನು ಆಯ್ಕೆಗೆ ಕಡೆಗಣಿಸಲಾಗಿದೆ.

ಕರ್ನಾಟಕದ ಆಟಗಾರರ ಪೈಕಿ ಕೆ.ಎಲ್.ರಾಹುಲ್ ಹಾಗೂ ಪ್ರಸಿದ್ಧ ಕೃಷ್ಣ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ವಿಕೆಟ್ ಬೇಟೆಯಲ್ಲಿ ಅಗ್ರಸ್ಥಾನದಲ್ಲಿದ್ದ ಪ್ರಸಿದ್ಧ 15 ಪಂದ್ಯಗಳಲ್ಲಿ 25 ವಿಕೆಟ್ಗಳನ್ನು ಗಳಿಸಿದ್ದರು.

ಇಂಗ್ಲೆಂಡ್ ಸರಣಿಯಲ್ಲಿ ಎಲ್ಲ ಐದು ಪಂದ್ಯಗಳನ್ನು ಆಡುವ ಮೂಲಕ ಉತ್ತಮ ಲಯದೊಂದಿಗೆ ಅದ್ಭುತ ದೈಹಿಕ ಸಾಮರ್ಥ್ಯ ಪ್ರದರ್ಶಿಸಿದ್ದ ಮೊಹಮ್ಮದ್ ಸಿರಾಜ್ ಅವರೂ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಟಿ20 ಕ್ರಿಕೆಟ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ರವಿ ಬಿಷ್ಣೋಯಿ ಅವರನ್ನು ಕಡೆಗಣಿಸಲಾಗಿದೆ.

ಇನ್ನುಳಿದಂತೆ ರಿಯಾನ್ ಪರಾಗ್, ಧ್ರುವ್ ಜುರೇಲ್, ಇಶಾನ್ ಕಿಶನ್ ಹಾಗೂ ನಿತೀಶ್ ರೆಡ್ಡಿ ಸಹ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಭಾರತ ತಂಡ ಇಂತಿದೆ:

ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್ಪ್ರೀತ್ ಬೂಮ್ರಾ, ಜಿತೇಶ್ ಶರ್ಮಾ, ಶಿವಂ ದುಬೆ, ಅರ್ಷದೀಪ್ ಸಿಂಗ್, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ, ತಿಲಕ್ ವರ್ಮಾ, ರಿಂಕು ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್.

ಮೀಸಲು ಆಟಗಾರರು: ಪ್ರಸಿದ್ದ ಕೃಷ್ಣ, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೇಲ್, ಯಶಸ್ವಿ ಜೈಸ್ವಾಲ್
.Asia Cup 2025 | ಭಾರತ ತಂಡ ಪ್ರಕಟ: ಸೂರ್ಯಕುಮಾರ್ ನಾಯಕ, ಗಿಲ್ ಉಪನಾಯಕ.ಮಹಿಳಾ ಏಕದಿನ ವಿಶ್ವಕಪ್: ತಂಡಕ್ಕೆ ಮರಳಿದ ರೇಣುಕಾ, ಶಫಾಲಿಗೆ ಕೊಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.