ಶಿಡ್ಲಘಟ್ಟ: ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕರು ಬುಧವಾರ ತಮ್ಮ ಶಾಲೆಯ ಮಕ್ಕಳನ್ನು ನಗರದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ‘ಗಂಧದಗುಡಿ’ ಸಿನಿಮಾಗೆ ಕರೆದೊಯ್ದು ವಿನೂತನ ಪ್ರಯೋಗವೊಂದನ್ನು ಕೈಗೊಂಡರು.

ಶಿಕ್ಷಕರು ಮಕ್ಕಳಿಗೆ ಈ ಚಲನಚಿತ್ರಕ್ಕೆ ಸಂಬಂಧಿಸಿದಂತೆ 30 ಅಂಕಗಳ ಪ್ರಶ್ನೆಪತ್ರಿಕೆಯೊಂದನ್ನು ಸಿದ್ಧಪಡಿಸಿದ್ದು, ಚಿತ್ರ ವೀಕ್ಷಿಸಿ ಬಂದ ಮಕ್ಕಳು ಅದಕ್ಕೆ ಉತ್ತರಿಸಬೇಕು.

‘ಗಂಧದಗುಡಿ’ ಈ ಸಿನಿಮಾದ ಪ್ರಮುಖ ಎರಡು ಪಾತ್ರಧಾರಿಗಳು ಯಾರು? ಈ ಸಿನಿಮಾದ ನಿರ್ದೇಶಕರು ಯಾರು? ಈ ಸಿನಿಮಾದಲ್ಲಿ ಯಾಯ ಯಾವ ಪ್ರಕಾರದ ಕಾಡು ತೋರಿಸಲಾಗಿದೆ? ಈ ಸಿನಿಮಾದಲ್ಲಿ ಯಾವ ಯಾವ ನದಿಗಳನ್ನು ತೋರಿಸಲಾಗಿದೆ? ಡಾ.ರಾಜಕುಮಾರ್ ಹುಟ್ಟಿದ ಸ್ಥಳ ಯಾವುದು? ಈ ಸಿನಿಮಾದಲ್ಲಿ ತೋರಿಸಲಾದ ದ್ವೀಪ ಯಾವುದು? ಈ ಸಿನಿಮಾದಲ್ಲಿ ತೋರಿಸಲಾದ ಸರ್ಕಾರಿ ಶಾಲೆ ಎಲ್ಲಿದೆ? ಕರ್ನಾಟಕದಲ್ಲಿ ಈಗ ಇರುವ ಅಂದಾಜು ಹುಲಿಗಳ ಸಂಖ್ಯೆ ಎಷ್ಟು? ಈ ಸಿನಿಮಾದ ಪ್ರಕಾರ ನಾಯಕ ಎಂದರೆ ಯಾರು? ಪುನೀತ್ ರಾಜಕುಮಾರ್ ಬಾಲನಟನಾಗಿ ನಟಿಸಿದ ಒಂದು ಚಲನಚಿತ್ರವನ್ನು ಹೆಸರಿಸಿ? ಈ ಸಿನಿಮಾದಲ್ಲಿ ತೋರಿಸಲಾದ ಜಲಪಾತ ಯಾವುದು? ಎಂಬ ಒಂದು ಅಂಕಗಳ ಪ್ರಶ್ನೆಗಳು.

ಈ ಸಿನಿಮಾದಲ್ಲಿ ಉತ್ತಮ ಸಂದೇಶ ಏನು? ಈ ಸಿನಿಮಾದಲ್ಲಿ ತೋರಿಸಲಾದ ವಿವಿಧ ಸ್ಥಳಗಳ ಹೆಸರುಗಳನ್ನು ಬರೆಯಿರಿ ಹಾಗೂ ಅವುಗಳಲ್ಲಿ ನಿಮಗೆ ಬಹಳ ಇಷ್ಟವಾದ ಒಂದು ಸ್ಥಳದ ಬಗ್ಗೆ ಐದಾರು ವಾಕ್ಯಗಳನ್ನು ಬರೆಯಿರಿ. ಗಂಧದಗುಡಿ ಸಿನಿಮಾದ ಕುರಿತಾಗಿ ನಿಮಗೆ ಅನಿಸಿದ್ದನ್ನು ಐದಾರು ವಾಕ್ಯಗಳಲ್ಲಿ ಬರೆಯಿರಿ ಎಂಬ ನಾಲ್ಕು ಅಂಕಗಳ ಪ್ರಶ್ನೆಗಳನ್ನು ಮಕ್ಕಳಿಗೆ ಕೊಡಲಾಗಿದೆ.

ತಾತಹಳ್ಳಿಯ ಸರ್ಕಾರಿ ಶಾಲೆಯ 3ನೇ ತರಗತಿಯಿಂದ 8ನೇ ತರಗತಿ ವರೆಗಿನ 80 ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿದ್ದರು.

‘ಇಂಚರ ಇಕೊಕ್ಲಬ್ ವತಿಯಿಂದ ಈ ಸಿನಿಮಾ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗಂಧದಗುಡಿ ಮುಜುಗರವಿಲ್ಲದೇ ನೋಡಬಹುದಾದ ಸಿನಿಮಾ. ಸಿನಿಮಾ ಉತ್ತಮ ಸಂದೇಶ ಹೊಂದಿದೆ. ಚಿತ್ರಮಂದಿರದ ಮಾಲೀಕ ಶಿವಕುಮಾರ ಹಾಗೂ ಸಿಬ್ಬಂದಿ ಮಕ್ಕಳಿಗೆಂದು ರಿಯಾಯಿತಿ ಕೊಟ್ಟಿರುವರು’ ಎಂದು ಶಿಕ್ಷಕ ಕಲಾಧರ್ ತಿಳಿಸಿದರು.

ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಚಿತ್ರ ವೀಕ್ಷಣೆ: ಶಿಡ್ಲಘಟ್ಟದ ಉಲ್ಲೂರುಪೇಟೆಯ ಸರ್ಕಾರಿ ಶಾಲೆಯ 60 ಮಕ್ಕಳಿಗೆ ಸ್ನೇಹ ಯುವಕರ ಸಂಘದ ಸದಸ್ಯರು ಉಚಿತವಾಗಿ ಗಂಧದಗುಡಿ ಚಲನಚಿತ್ರ ವೀಕ್ಷಣೆ ಮಾಡಿಸಿದರು. ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಲು ಚಲನಚಿತ್ರ ಪರಿಣಾಮಕಾರಿ. ಪುನೀತ್ ಅಭಿನಯದ ಗಂಧದಗುಡಿ ಚಲನಚಿತ್ರ ವೀಕ್ಷಣೆಗೆ ಸರ್ಕಾರಿ ಶಾಲೆಯ ಮಕ್ಕಳನ್ನು ಕರೆದುಕೊಂಡು ಬಂದಿದ್ದೇವೆ ಎಂದು ಸ್ನೇಹ ಯುವಕರ ಸಂಘದ ಅಧ್ಯಕ್ಷ ಭರತ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.