ಗುಡಿಬಂಡೆ: ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಸಂವಿಧಾನದ ಸಂರಕ್ಷಣಾ ಪಡೆ ವತಿಯಿಂದ ಸಂವಿಧಾನದ ಅಳಿವು, ಉಳಿವು, ಸಂರಕ್ಷಣೆಯ ಒಂದು ದಿನದ ಕಾರ್ಯಾಗಾರವನ್ನು ಶುಕ್ರವಾರ ಏರ್ಪಡಿಸಲಾಗಿತ್ತು.

ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಶಿವಸುಂದರ್ ಮಾತನಾಡಿ, ‘ನಮ್ಮ ದೇಶದ ಪ್ರಜೆಗಳ ನಾಗರಿಕ ಹಕ್ಕುಗಳನ್ನು ಪ್ರಶ್ನಿಸುವ ಹಕ್ಕು ಚುನಾವಣಾ ಆಯೋಗಕ್ಕೆ ಇಲ್ಲ’ ಎಂದು ಪ್ರತಿಪಾದಿಸಿದರು.

ಭಾರತ ದೇಶದ ಮತದಾರರ ಪಟ್ಟಿಯನ್ನು ಇಂದಿನ ಚುನಾವಣಾ ಆಯೋಗವು ಒಂದು ರೀತಿ ಮತದಾರರ ಪಟ್ಟಿಯನ್ನು ಪರಿಕ್ಷರಣೆ ಮಾಡುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಚುನಾವಣಾ ಆಯೋಗವು ಕಾಲಕಾಲಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದು ಸಾಮಾನ್ಯ. ಆದರೆ ಜನರಿಗೆ ಅರ್ಥವಾಗದ ರೀತಿ ಪರಿಷ್ಕರಣೆ ಮಾಡುವುದನ್ನು ದೇಶದ ಜನ ಮನವರಿಕೆ ಮಾಡಿಕೊಳ್ಳಬೇಕು. ದೇಶವಾಸಿಗಳನ್ನು ಕೇಂದ್ರ ಸರ್ಕಾರ ಅನುಮಾನದಿಂದ ನೋಡುತ್ತಿದೆ ಎಂದರು.

ಹಿಂದಿನ ಕಾಲದಲ್ಲಿ ರಾಣಿ ಹೊಟ್ಟೆಯಲ್ಲಿ ಮಾತ್ರ ರಾಜ ಹುಟ್ಟುತ್ತಿದ್ದ. ಈಗ ರಾಜ ಮತದಾರರ ಪಟ್ಟಿಯಲ್ಲಿ ಹುಟ್ಚುತ್ತಿದ್ದಾನೆ. ಈ ದೇಶದ ಸಂವಿಧಾನ ಪ್ರತಿಯೊಬ್ಬ ನಾಗರಿಕ ಘನತೆಯಿಂದ ಬದುಕುವ ಹಕ್ಕು ನೀಡಿದೆ. 18 ವರ್ಷ ತುಂಬಿದ ಈ ದೇಶದ ಪ್ರತಿಯೊಬ್ಬರೂ ಮತದಾನದ ಹಕ್ಕು ಪಡೆಯುತ್ತಾರೆ ಎಂದು ಹೇಳಿದರು.

ಮತದಾರರ ಪಟ್ಚಿ ಪರಿಷ್ಕರಣೆಗೆ ಮನೆಗಳಿಗೆ ಬಿಎಲ್ಒ ಬಂದು ಅರ್ಜಿ ನೀಡುತ್ತಾರೆ. ಆ ಅರ್ಜಿ ಭರ್ತಿ ಮಾಡಿ ಚುನಾವಣಾ ಕಚೇರಿಗೆ ತಲುಪಿಸಬೇಕು. ಇಲ್ಲವಾದಲ್ಲಿ ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರಲ್ಲ ಎಂದರು.

ಕಾರ್ಯಕ್ರಮದಲ್ಲಿ ಡಿಎಸ್ಎಸ್ ಹಿರಿಯ ಮುಖಂಡ ಎನ್. ವೆಂಕಟೇಶ್, ಕಿರಣ್ ಕಮಾಲ್ ಪ್ರಸಾದ್, ಎಲ್. ಲಕ್ಷ್ಮಿನಾರಾಯರೆಡ್ಡಿ, ಮಹ್ಮದ್ ನೂರ್ ವುಲ್ಲಾ, ಎಚ್.ಪಿ. ಲಕ್ಷ್ಮಿನಾರಾಯಣ, ಮಂಜುನಾಥ್ ರೆಡ್ಡಿ , ಸೌಭಾಗ್ಯಮ್ಮ, ಸೈದ್ ಬಾಷ್, ರಿಜ್ವಾನ್, ಸೇಮಿರ್, ಶ್ರೀರಂಗಾಚಾರಿ, ನಾರಾಯಣಸ್ವಾಮಿ, ಚನ್ನರಾಯಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.