ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಒಬ್ಬರು ಗುಣಮುಖ

ಒಂದೇ ಕುಟುಂಬದ 5 ಮಂದಿಗೆ ತಗುಲಿದ್ದ ಕೊರೊನಾ ಸೋಂಕು
Last Updated 28 ಮೇ 2020, 17:38 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಒಂದೇ ಕುಟುಂಬದ 5 ಮಂದಿಗೆ ಸೋಂಕು ದೃಢಪಟ್ಟಿದ್ದವರಲ್ಲಿ ಒಬ್ಬರು ಗುರುವಾರ ಗುಣಮುಖರಾಗಿದ್ದಾರೆ. ಅವರು ಚಿಕ್ಕಬಳ್ಳಾಪುರದ ಕೋವಿಡ್- 19 ಆಸ್ಪತ್ರೆಯಿಂದ ಬಿಡುಗಡೆಯಾಗಿ ನಗರದ ಸಾರ್ವಜನಿಕ ಆಸ್ಪತ್ರೆಯ ಕ್ವಾರಂಟೈನ್ ಕೇಂದ್ರಕ್ಕೆ ಬಂದಿದ್ದಾರೆ.

ಸೋಂಕಿತ ಕುಟುಂಬದ ಮುಖ್ಯಸ್ಥನ ಮಗ ಸಂಪೂರ್ಣ ಗುಣಮುಖ ರಾಗಿದ್ದಾರೆ. 3-4 ದಿನಗಳಲ್ಲಿ ಉಳಿದವರು ಸಹ ಗುಣಮುಖರಾಗಿ ಬಿಡುಗಡೆಯಾಗಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮೇ 9ರಂದು ಕುಟುಂಬದ 71 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಮರುದಿನ 46 ವರ್ಷದ ಮಗನಿಗೆ ದೃಢಪಟ್ಟಿತ್ತು. 3 ದಿನಗಳ ನಂತರ 22 ವರ್ಷದ ಮೊಮ್ಮಗನಿಗೆ ಕಾಣಿಸಿಕೊಡಿತ್ತು. ಮೇ 21ರಂದು 40 ವರ್ಷದ ಮಗಳು ಮತ್ತು 47 ವರ್ಷದ ಅಳಿಯನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಎಲ್ಲರನ್ನೂ ಚಿಕ್ಕಬಳ್ಳಾಪುರದ ಕೋವಿಡ್-19 ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಒಂದೇ ಕುಟುಂಬದ 5 ಜನರಿಗೆ ಕೊರೊನಾ ಕಾಣಿಸಿಕೊಂಡಿದ್ದು, ನಗರದ ಜನರಲ್ಲಿ ಆತಂಕ ಮೂಡಿತ್ತು.

ಇವರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಸೊಸೆ, ಮತ್ತೊಬ್ಬ ಮೊಮ್ಮಗ, ಕಾರಿನ ಚಾಲಕ, ಅಂಗಡಿಯ ಕೆಲಸಗಾರರನ್ನು ಕ್ವಾರಂಟೈನ್ ಮಾಡಿ ಮೂರು ಬಾರಿ ತಪಾಸಣೆ ಮಾಡಲಾಗಿದೆ. ಮೂರು ಬಾರಿಯೂ ಅವರ ಪರೀಕ್ಷಾ ವರದಿಗಳು ನೆಗೆಟಿವ್ ಬಂದಿವೆ.

ಮೇ 4ರಂದು ಸೋಂಕಿತ ಹಿರಿಯ ವ್ಯಕ್ತಿಯ ಪತ್ನಿ ಮೃತಪಟ್ಟಿದ್ದರಿಂದ ನೂರಾರು ಜನ ಅವರ ಮನೆಗೆ ಭೇಟಿ ನೀಡಿದ್ದರು. ಬಳಿಕ ಇಡೀ ಕುಟುಂಬದವರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ನಗರದ ಜನ ತಲ್ಲಣಗೊಂಡಿದ್ದರು. ತಾಲ್ಲೂಕು ಆಡಳಿತ 9ನೇ ವಾರ್ಡ್ ಅನ್ನು ಸಂಪೂರ್ಣ ಸೀಲ್‌ಡೌನ್ ಮಾಡಿ ಜನರನ್ನು ಮನೆಯಿಂದ ಹೊರಗೆ ಬರದಂತೆ ನಿರ್ಬಂಧಿಸಲಾಗಿತ್ತು. ಸಾರ್ವಜನಿಕರ ಚಲನ ವಲನಗಳನ್ನು ಗಮನಿಸಲು ಡ್ರೋಣ್ ಕ್ಯಾಮೆರಾ ಬಳಸಲಾಗಿತ್ತು.

‘ನಗರದ ಸಾರ್ವಜನಿಕ ಆಸ್ಪತ್ರೆಯ ಕ್ವಾರಂಟೈನ್‌ನಲ್ಲಿ ಇರುವ ಕುಟುಂಬದ ಸೊಸೆ, ಮೊಮ್ಮಗ ಹಾಗೂ ಗುಣಮುಖರಾಗಿ ವಾಪಸ್ ಬಂದಿರುವ ಮಗನನ್ನು 2- 3 ದಿನಗಳಲ್ಲಿ ಅವರ ಮನಗೆ ಕಳುಹಿಸಲಾಗುವುದು. ಮನೆಗೆ ಕಳುಹಿಸುವ ಮುನ್ನ ಮನೆಗೆ ಕ್ರಿಮಿನಾಶಕವನ್ನು ಸಿಂಪಡಣೆ ಮಾಡಿ ಒಂದು ದಿನ ಸಂಪೂರ್ಣ ಬಂದ್ ಮಾಡಲಾಗುವುದು. ನಂತರ ಸ್ವಚ್ಛಗೊಳಿಸಿ ಮನೆ ಪ್ರವೇಶಕ್ಕೆ ಅನುವು ಮಾಡಲಾಗುವುದು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT