ಸೋಮವಾರ, ಜುಲೈ 26, 2021
27 °C

ಚಿಂತಾಮಣಿ: ಕೊರೊನಾಗೆ ಒಬ್ಬ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ನಗರದಲ್ಲಿ ಭಾನುವಾರ 6 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶನಿವಾರ 25ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಒಬ್ಬ ವ್ಯಕ್ತಿ ಕೋಲಾರದ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.

ನಗರದ ಎನ್.ಆರ್.ಬಡಾವಣೆಯ ವ್ಯಕ್ತಿಯನ್ನು ಅನಾರೋಗ್ಯದಿಂದ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿತ್ತು. ಜುಲೈ 14ರಂದು ಗಂಟಲುಸ್ರಾವ ಪರೀಕ್ಷೆ ಮಾಡಿಸಿದ್ದು ಕೋವಿಡ್ ಇರುವುದು ದೃಢಪಟ್ಟಿತ್ತು. ಹೀಗಾಗಿ ಕೋವಿಡ್-19ಕ್ಕೆ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.

ನಗರದ ಜೆ.ಜೆ ಕಾಲೋನಿಯಲ್ಲಿ 22 ವರ್ಷದ ಯುವಕ, ಕುಂಬಾರಪೇಟೆಯಲ್ಲಿ 12 ವರ್ಷದ ಬಾಲಕ, ದೊಡ್ಡಪೇಟೆಯಲ್ಲಿ 45 ವರ್ಷದ ಮಹಿಳೆ, ಕೆ.ಜಿ.ಎನ್.ಬಡಾವಣೆಯಲ್ಲಿ 47 ವರ್ಷದ ವ್ಯಕ್ತಿ, ಟ್ಯಾಂಕ್ ಬಂಡ್ ರಸ್ತೆಯಲ್ಲಿ 57 ವರ್ಷದ ವ್ಯಕ್ತಿ ಸೇರಿ ಒಟ್ಟು 5 ಪ್ರಕರಣಗಳು ವರದಿಯಾಗಿದೆ. ಸೋಂಕಿತರನ್ನು ತಾಲ್ಲೂಕಿನ ಮಸ್ತೇನಹಳ್ಳಿಯ ಕೋವಿಡ್-19 ಆಸ್ಪತ್ರೆಗೆ ಕಳುಹಿಸಲಾಗಿದೆ. ನಗರಸಭೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೋಂಕಿತರ ಪ್ರದೇಶಗಳನ್ನು ಸೀಲ್‌ಡೌನ್ ಮಾಡಿದ್ದಾರೆ.

ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಮನೆಗಳಲ್ಲಿಯೇ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ತಾಲ್ಲೂಕಿನ ಇನ್ನೂ 1,130 ಜನರ ಗಂಟಲುಸ್ರಾವದ ವರದಿ ಬರಬೇಕಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು