ಬಾಗೇಪಲ್ಲಿ: ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ದ ಜಿಲ್ಲಾ ಸಮಿತಿಯ 17ನೇ ಸಮ್ಮೇಳನ ನ. 29 ಹಾಗೂ 30ರಂದು ನಡೆಯಲಿದ್ದು, ಇದರ ಅಂಗವಾಗಿ ಪಟ್ಟಣದ ಮುಖ್ಯರಸ್ತೆ ಸೇರಿದಂತೆ ವಿವಿಧ ವಾರ್ಡ್ಗಳಲ್ಲಿ ಗುರುವಾರ ಮುಖಂಡರು ದೇಣಿಗೆ ಸಂಗ್ರಹಿಸಿದರು.

ಪಟ್ಟಣದ ಸುಂದರಯ್ಯ ಭವನದಿಂದ ಹೊರಟ ಸಿಪಿಐ(ಎಂ) ಮುಖಂಡರು ಪುರಸಭೆ, ಬಸ್ ನಿಲ್ದಾಣದ ಮುಂದೆ, ಭಜನೆ ಮಂದಿರ, ಸಂತೇ ಮೈದಾನ, ಕುಂಬಾರಪೇಟೆ, ಗೂಳೂರು ರಸ್ತೆ, ಡಾ.ಎಚ್.ಎನ್. ವೃತ್ತ ಸೇರಿದಂತೆ ವಿವಿಧ ವಾರ್ಡ್ಗಳಲ್ಲಿ ಸಂಚರಿಸಿ ಸಮ್ಮೇಳನ ನಡೆಸಲು ಅಂಗಡಿಗಳು, ಬೀದಿ
ವ್ಯಾಪಾರಿಗಳು ಮತ್ತು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು.

ಸಿಪಿಐ(ಎಂ) ತಾಲ್ಲೂಕು ಕಾರ್ಯದರ್ಶಿ ಮಹಮದ್ ಅಕ್ರಂ ಮಾತನಾಡಿ, ಎರಡು ದಿನಗಳ ಕಾಲ ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಪಕ್ಷದ ಜಿಲ್ಲಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ದೇಣಿಗೆ ಸಂಗ್ರಹ ಮಾಡಲಾಗಿದೆ. ಸಿಪಿಎಂ ಜನಸಾಮಾನ್ಯರು, ಕೃಷಿ ಕೂಲಿ ಕಾರ್ಮಿಕರ ಪಕ್ಷ. ಜನರೇ ಜೀವಾಳವಾಗಿದ್ದಾರೆ. ಇದರಿಂದ ಜನರಿಂದ ದೇಣಿಗೆ ಪಡೆದು ಸಮ್ಮೇಳನ ಮಾಡಲಾಗುವುದು ಎಂದು
ತಿಳಿಸಿದರು.

ಒಟ್ಟು ₹ 39,777 ದೇಣಿಗೆ ಸಂಗ್ರಹವಾಗಿದೆ.ಮುಖಂಡರಾದ ಎಂ.ಪಿ. ಮುನಿವೆಂಕಟಪ್ಪ, ಪಿ. ಮಂಜುನಾಥರೆಡ್ಡಿ, ಹೇಮಚಂದ್ರ, ಸಾವಿತ್ರಮ್ಮ, ಅಶ್ವಥ್ಥಪ್ಪ, ಶ್ರೀರಾಮನಾಯಕ್, ಜಿ. ಕೃಷ್ಣಪ್ಪ, ಸಾದಿಕ್, ರಮೇಶ್, ಸೋಮಶೇಖರ್, ರಘುರಾಮರೆಡ್ಡಿ ಹಾಗೂ ಕಾರ್ಯಕರ್ತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.