ಚಿಕ್ಕಬಳ್ಳಾಪುರ: ದೇವರ ಉತ್ಸವಮೂರ್ತಿ ಮೆರವಣಿಗೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಆನೆಮೊಡಗು ಕೊತ್ತೂರು ಗ್ರಾಮದಲ್ಲಿ ಭಾನುವಾರ ರಾತ್ರಿ ದಲಿತರು ಮತ್ತು ಒಕ್ಕಲಿಗರ ನಡುವೆ ವಾಗ್ವಾದ ನಡೆದಿದೆ.

ಗ್ರಾಮದೇವತೆ ಮಾರಮ್ಮ ದೇವಿ ಉತ್ಸವಮೂರ್ತಿಯನ್ನು ಮೆರವಣಿಗೆ ಮಾಡಲು ಗ್ರಾಮಸ್ಥರು ಎಲ್ಲ ಜಾತಿಯ ಜನರಿಂದ ಚಂದಾ ಹಣ ವಸೂಲಿ ಮಾಡಿದ್ದರು. ಆದರೆ ಭಾನುವಾರ ರಾತ್ರಿ ಮೆರವಣಿಗೆ ವೇಳೆ ದಲಿತರು ಉತ್ಸವಮೂರ್ತಿಯನ್ನು ಹೊತ್ತುಕೊಳ್ಳಲು ಮುಂದಾಗಿದ್ದರು. ಇದನ್ನು ಒಕ್ಕಲಿಗ ಸಮುದಾಯದವರು ತಡೆದಿದ್ದರು.

ಆಗ ಎರಡೂ ಸಮುದಾಯಗಳ ನಡುವೆ ವಾಗ್ವಾದ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಇದರಿಂದಾಗಿ ಗ್ರಾಮ ದೇವತೆಯಾದ ಮಾರಮ್ಮ ಮತ್ತು ಗಂಗಮ್ಮನ ಉತ್ಸವ ಮೂರ್ತಿಗಳು ಬೀದಿಯಲ್ಲಿ ಬಿಡಲಾಗಿತ್ತು.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಸೋಮವಾರ ಪೊಲೀಸರು, ಕಂದಾಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಎರಡೂ ಸಮುದಾಯದವರನ್ನು ದೇವಸ್ಥಾನದ ಬಳಿ ಕರೆಯಿಸಿ ಸಂಧಾನ ನಡೆಸಿದರು. ಗ್ರಾಮದಲ್ಲಿ ಪರಿಸ್ಥಿತಿ ಸದ್ಯ ತಿಳಿಯಾಗಿದ್ದು, ಪೊಲೀಸ್ ಬಂದೋಬಸ್ತ್ ಇದೆ.