ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ | ಚರಂಡಿಯ ಹೂಳು, ತ್ಯಾಜ್ಯ ತೆಗೆದು ಸ್ವಚ್ಛತೆ

Published 22 ಏಪ್ರಿಲ್ 2023, 14:44 IST
Last Updated 22 ಏಪ್ರಿಲ್ 2023, 14:44 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿನ ಚರಂಡಿಗಳಲ್ಲಿ ಹೂಳು ತುಂಬಿ ಕೊಳಚೆ ನೀರಿನ ಜತೆ ಮಳೆಯ ನೀರು ರಸ್ತೆಯ ಮೇಲೆ ಸಂಗ್ರಹ ಆಗಿರುವ ಸ್ಥಳಕ್ಕೆ ಶನಿವಾರ ಪುರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಸಿಬ್ಬಂದಿಯವರು ಯಂತ್ರಗಳಿಂದ ಚರಂಡಿಗಳಲ್ಲಿದ್ದ ಹೂಳು, ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಿದರು.

‘ಮಳೆ, ರಸ್ತೆಗೆ ಹರಿದ ಕೊಳಚೆ ನೀರು’ ಎಂಬ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯಲ್ಲಿ ಸುದ್ದಿ ಪ್ರಕಟ ಆಗಿತ್ತು.

ಈ ಹಿನ್ನೆಲೆಯಲ್ಲಿ ಪಟ್ಟಣದ ಡಾ.ಎಚ್.ಎನ್.ವೃತ್ತ (ಗೂಳೂರು ವೃತ್ತ)ಕ್ಕೆ ಶನಿವಾರ ಬೆಳಿಗ್ಗೆ ಪುರಸಭೆ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ಮಾಡಿದರು. ವೃತ್ತದಲ್ಲಿನ ನಂದಿನಿ ಹಾಲಿನ ಕೇಂದ್ರದ ಪಕ್ಕ, ಮುಖ್ಯರಸ್ತೆಯ ಹಾಗೂ ಸುತ್ತಲಿನ ಚರಂಡಿಗಳಲ್ಲಿ ತುಂಬಿಕೊಂಡಿದ್ದ ಹೂಳು, ಕಸ, ಕಡ್ಡಿ ಹಾಗೂ ತ್ಯಾಜ್ಯಗಳನ್ನು ಯಂತ್ರಗಳಿಂದ ಸ್ವಚ್ಛಗೊಳಿಸಿ ರಸ್ತೆಯ ಪಕ್ಕದಲ್ಲಿ ಹಾಕಿದರು. ವೃತ್ತದಲ್ಲಿನ ಸಾರ್ವಜನಿಕ ಶೌಚಾಲಯದ ಕೆಳ ಭಾಗದಲ್ಲಿನ ಚರಂಡಿಯನ್ನು ಸ್ವಚ್ಛಗೊಳಿಸಿದರು.

‘ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿನ ಚರಂಡಿಗಳಲ್ಲಿ ಕಸ, ಕಡ್ಡಿ, ಪ್ಲಾಸ್ಲಿಕ್, ಕವರ್‌ಗಳನ್ನು ಹಾಕದಂತೆ ಪುರಸಭೆ ಅಧಿಕಾರಿಗಳು, ಸಿಬ್ಬಂದಿಯವರು ಗಮನ ಹರಿಸಬೇಕು. ತಾತ್ಕಾಲಿಕ ಪರಿಹಾರಗಳನ್ನು ಬಿಟ್ಟು, ಮಳೆಯ, ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಹೂಳು, ತ್ಯಾಜ್ಯಗಳನ್ನು ಸ್ವಚ್ಛಗೊಳಿಸಬೇಕು‘ ಎಂದು ನಂದಿನಿ ಹಾಲಿನ ಕೇಂದ್ರದ ವ್ಯಾಪಾರಿ ವೆಂಕಟರಾಮರೆಡ್ಡಿ ಮನವಿ ಮಾಡಿದರು.

‘ಪಟ್ಟಣದ ಗೂಳೂರು ವೃತ್ತದಲ್ಲಿನ ಚರಂಡಿಗಳನ್ನು ಸ್ವಚ್ಛತೆ ಮಾಡಬೇಕು ಎಂದು ಪುರಸಭೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಚರಂಡಿಗಳಲ್ಲಿ ಯಂತ್ರದಿಂದ ಹೂಳು, ತ್ಯಾಜ್ಯವನ್ನು ಸ್ವಚ್ಛತೆ ಮಾಡಲಾಗಿದೆ. ಬೀದಿಬದಿ ವ್ಯಾಪಾರಸ್ಥರು, ಅಂಗಡಿ, ಹೋಟೆಲ್‌ ಮಾಲೀಕರು, ಒಣ, ಹಸಿ ಕಸ, ತ್ಯಾಜ್ಯವನ್ನು ಬೇರ್ಪಡಿಸಿ, ಪೌರ ಸಿಬ್ಬಂದಿಗೆ ನೀಡಬೇಕು. ಚರಂಡಿಗಳಲ್ಲಿ, ರಸ್ತೆಗಳಲ್ಲಿ ಬಿಸಾಡಿದರೆ ದಂಡ ವಿಧಿಸಲಾಗುವುದು‘ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಮಧುಕರ್ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT