ಬಾಗೇಪಲ್ಲಿ: ಗ್ರಾಮೀಣ ಪ್ರದೇಶಗಳಲ್ಲಿನ ಜನರ ಆಸ್ತಿಗಳ ದಾಖಲೆಗಳಲ್ಲಿ ಪಾರದರ್ಶಕತೆ ತರಲು ಪಂಚಾಯಿತಿಗಳಲ್ಲಿ ಇ–ಖಾತೆ ನೊಂದಣಿ ಮಾಡಲು ಡಿಸೆಂಬರ್ 18ರಂದು ಸರ್ಕಾದ ಅಧಿಕೃತ ಆದೇಶ ಹೊರಡಿಸಿದೆ. ಆದರೆ ಇ–ಖಾತೆ ತಂತ್ರಾಂಶದ ಸರ್ವರ್ ಕೆಲಸ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿಲ್ಲ. ಸರ್ವರ್ ಸಿದ್ಧತೆ ಮಾಡದ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಪ್ರದೇಶದ ಜನರು ತಮ್ಮ ವಂಶವೃಕ್ಷ, ಜಮೀನು, ಕಟ್ಟಡಗಳ ಹಳೆ ಖಾತೆಗಳು ಇಂದಿಗೂ ಸಹ ಕಚೇರಿಗಳಲ್ಲಿ ಸಮರ್ಪಕವಾಗಿ ಜನರಿಗೆ ಸಿಗುತ್ತಿಲ್ಲ. ತಮ್ಮ ಜಮೀನುಗಳ ದಾಖಲೆಗಳು ಪಡೆಯಲು ಪ್ರತಿದಿನ ತಾಲ್ಲೂಕು ಮತ್ತು ನಾಡಕಚೇರಿಗಳಿಗೆ ಜನರು ಅಲೆದಾಡುವ ಸ್ಥಿತಿ ಇದೆ.

ಗ್ರಾಮೀಣ ಜನರು ತಮ್ಮ ಹಳೆ ದಾಖಲೆಗಳನ್ನು, ಹೊಸ ದಾಖಲೆಗಳು ಮತ್ತು ತಿದ್ದುಪಡಿ ಮಾಡಿಸಲು ಪ್ರತಿದಿನ ತಮ್ಮ ಕೃಷಿ ಕೆಲಸಗಳನ್ನು ಬಿಟ್ಟು ಪಂಚಾಯಿತಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಸರ್ವರ್ ಕೆಲಸ ಮಾಡಬಹುದು ಎಂದು ಕಚೇರಿಗಳ ಮುಂದೆ ಜನರು ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಸರ್ವರ್ ಕೆಲಸ ಮಾಡದೇ ಇರುವುದರಿಂದ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಗ್ರಾಮಸ್ಥರು ವಾಪಸ್ ಹೋಗುವ ಸ್ಥಿತಿ ಆಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಇ-ಸ್ವತ್ತಿನ ದಾಖಲೆ ಪಡೆಯಲು ಸರ್ಕಾರ ಸ್ವತ್ತಿನ ದಾಖಲೆಗಳನ್ನು ತಂತ್ರಾಂಶದಲ್ಲಿ ಆಪ್ಲೋಡ್ ಮಾಡಬೇಕಾಗಿದೆ. ಆದರೆ ತಾಲ್ಲೂಕಿನಲ್ಲಿ ಹೆಚ್ಚಾಗಿ ಗ್ರಾಮ, ತಾಂಡಗಳು ಇವೆ. ಬಹುತೇಕರು ಕೃಷಿಕೂಲಿಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು ಇದ್ದಾರೆ. ತಮ್ಮ ವಂಶವೃಕ್ಷದ ಪ್ರಕಾರ ಸ್ವತ್ತು ಮಕ್ಕಳಿಗೆ ಸೇರಬೇಕಾಗಿದೆ. ಆದರೆ ಕೆಲ ದಾಖಲೆಗಳು ಮಕ್ಕಳ ಹೆಸರಿಗೆ ಪಹಣಿ, ಖಾತೆ ಬಂದಿಲ್ಲ. ಬಹುತೇಕ ಶೇ 85ರಷ್ಟು ಗ್ರಾಮಸ್ಥರು ಅನಕ್ಷರಸ್ಥರಾಗಿದ್ದಾರೆ. ಗ್ರಾಮದ ಮುಖಂಡರ ಮೂಲಕ ಜನರು ಪಂಚಾಯಿತಿಗಳಲ್ಲಿ ಇ-ಸ್ವತ್ತಿನ ಖಾತೆ ಮಾಡಿಸಲು ಮುಂದಾಗಿದ್ದಾರೆ. ಇದರಿಂದ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಲಿದೆ ಎಂದು ಗ್ರಾಮಸ್ಥರ ಆರೋಪವಾಗಿದೆ.

ಜನವಸತಿ ಪ್ರದೇಶಗಳಲ್ಲಿ ಜನರು ವಾಸ ಮಾಡುತ್ತಿದ್ದಾರೆ. ಆಧಾರ್, ಗುರುತಿನ ಚೀಟಿ, ತಮ್ಮ ಆಸ್ತಿಗಳ ದಾಖಲೆ ಸಮರ್ಪಕವಾಗಿ ಇದೆ. ಆದರೆ ಕೆಲ ಜನವಸತಿ ಪ್ರದೇಶಗಳ ಹೆಸರುಗಳನ್ನು ತಂತ್ರಾಂಶದಲ್ಲಿ ಅಳವಡಿಸಿಲ್ಲ. ಗ್ರಾಮಗಳ, ಖಾತೆಗಳ ನಂಬರ್ಗಳು ತಂತ್ರಾಂಶದಲ್ಲಿ ಕಾಣುತ್ತಿಲ್ಲ. ಇದರಿಂದ ಜನವಸತಿ ಪ್ರದೇಶಗಳ ಜನರು ಇ– ಖಾತೆ ಮಾಡಿಸಲು ಕಚೇರಿಗೆ ದಾಖಲೆಗಳನ್ನು ಪಡೆಯಲು ಅಲೆದಾಡುವ ಸ್ಥಿತಿ ನಿರ್ಮಾಣ ಆಗಿದೆ. ಸರ್ಕಾರ ಕೂಡಲೇ ಜನವಸತಿ ಪ್ರದೇಶಗಳ ಹೆಸರು, ಖಾತೆ ನಂಬರ್ಗಳನ್ನು ದಾಖಲು ಮಾಡಬೇಕು ಎಂದು ಪಟ್ಟಣದ ಹೊರವಲಯದ ಶ್ರೀರಾಮರೆಡ್ಡಿ ಬಡಾವಣೆ ನಿವಾಸಿ ಕೆ.ಮುನಿಯಪ್ಪ ಒತ್ತಾಯಿಸಿದ್ದಾರೆ.

ಇ–ಖಾತೆ ತಂತ್ರಾಂಶ ಸರ್ವರ್ ಕೆಲಸ ಮಾಡುತ್ತಿಲ್ಲ ಎಂದು ಜನರಿಗೆ ತಿಳಿಸಿದ್ದೇವೆ. ಜನರಿಗೆ ಸರ್ವರ್ ಕೆಲಸದ ಬಗ್ಗೆ ತಿಳಿಯುತ್ತಿಲ್ಲ. ಏಕಾಏಕಿ ನಮ್ಮ ಮೇಲೆ ಆಕ್ರೋಶ ಪಡಿಸುತ್ತಿದ್ದಾರೆ ಎಂದು ಪಂಚಾಯಿತಿ ಅಧಿಕಾರಿಗಳು, ಕಂಪ್ಯೂಟರ್ ಅಪರೇಟರ್ಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.