ಬಾಗೇಪಲ್ಲಿ: ‘ಸರ್ಕಾರಿ ವಿದ್ಯಾರ್ಥಿನಿಲಯ ಹಾಗೂ ಸರ್ಕಾರಿ ವಸತಿ ಶಾಲೆಗಳ ಡಿ.ವರ್ಗದ ಹೊರಗುತ್ತಿಗೆ ನೌಕರರಿಗೆ ಬಾಕಿ ಇರುವ ವೇತನ ಹಾಗೂ ಲಾಕ್ ಡೌನ್ ಅವಧಿಯ ವೇತನಗಳನ್ನು ವಿತರಿಸಬೇಕು’ ಎಂದು ಆಗ್ರಹಿಸಿ ತಾಲ್ಲೂಕು ಸರ್ಕಾರಿ ವಿದ್ಯಾರ್ಥಿ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು, ನೌಕರರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪಟ್ಟಣದ ಡಾ.ಎಚ್.ಎನ್.ವೃತ್ತದಿಂದ ಹೊರಟ ಪ್ರತಿಭಟನಾಕಾರರು ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿದರು.

ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಆಂಜನೇಯರೆಡ್ಡಿ ಮಾತನಾಡಿ, ಮಾಜ, ಹಿಂದುಳಿದ ವರ್ಗಗಳ ಇಲಾಖೆಗಳ ವಿದ್ಯಾರ್ಥಿನಿಲಯಗಳಲ್ಲಿ, ಆಶ್ರಮ ಶಾಲೆ, ಮೊರಾರ್ಜಿ, ಕಿತ್ತೂರುರಾಣಿ ಚನ್ನಮ್ಮ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವಸತಿ
ಶಾಲೆಗಳಲ್ಲಿ ಅನೇಕ ವರ್ಷಗಳಿಂದ ಡಿ ವರ್ಗದ ನೌಕರರು ಅಡುಗೆ, ಸ್ವಚ್ಛತೆ ಹಾಗೂ ಕಾವಲು ಕೆಲಸ ಮಾಡುತ್ತಿದ್ದಾರೆ. ಕೊರೊನಾ ಪೂರ್ವದ ಕೆಲ ತಿಂಗಳು ಹಾಗೂ ಲಾಕ್‌ಡೌನ್ ಅವಧಿಯಲ್ಲಿ ಸೇವೆ ಸಲ್ಲಿಸಿರುವ ವೇತನಗಳನ್ನು ಇಲಾಖೆಯವರು ಪಾವತಿ ಮಾಡಿಲ್ಲ’ ಎಂದು ಆರೋಪಿಸಿದರು.

‘ತೀರಾ ಆರ್ಥಿಕ ಸಂಕಷ್ಟದಲ್ಲಿ ಇರುವ ನೌಕರರು ಮಹಿಳೆಯರೇ ಆಗಿದ್ದಾರೆ. ಯಾವುದೇ ಆದಾಯಗಳ ಮೂಲವೇ ಇಲ್ಲ. ಇದರಿಂದ ಕುಟುಂಬಗಳನ್ನು ಪೋಷಣೆ ಮಾಡುವುದು ತೊಂದರೆ ಆಗಿದೆ. ಕೂಡಲೇ ನೌಕರರಿಗೆ ಬಾಕಿ ಇರುವ ವೇತನಗಳನ್ನು ವಿತರಿಸಬೇಕು’ ಎಂದು ಮನವಿ ಮಾಡಿದರು.

ಪ್ರತಿಭಟನಾ ಸ್ಥಳಕ್ಕೆ ತಾಲ್ಲೂಕು ಕಚೇರಿ ಶಿರಸ್ತೇದಾರ್ ಸೂರ್ಯನಾರಾಯಣ ಬಂದು ಮನವಿ ಪತ್ರ ಸ್ವೀಕರಿಸಿದರು.

ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಜಿ.ಮುಸ್ತಾಫ, ತಾಲ್ಲೂಕು ಸರ್ಕಾರಿ ವಿದ್ಯಾರ್ಥಿ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿಯಪ್ಪ, ತಾಲ್ಲೂಕು ಅಧ್ಯಕ್ಷ ನಾರಾಯಣ್ ನಾಯಕ್, ನಾರಾಯಣಪ್ಪ, ಅಶ್ವಥ್ಥಪ್ಪ, ಈಶ್ವರಮ್ಮ, ನಾಗಲಕ್ಷ್ಮಮ್ಮ, ಅಲುವೇಲಮ್ಮ, ನಂದಿನಿ, ಲಕ್ಷ್ಮೀನರಸಮ್ಮ, ನಾಗಮಣಿ, ಟಿ.ನಾಗಮ್ಮ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.