ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಉಳಿಸಲು ಪಣ

ಜಿಲ್ಲೆಯ ವಿವಿಧೆಡೆ ಪರಿಸರ ದಿನ ಆಚರಣೆ
Last Updated 5 ಜೂನ್ 2021, 14:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧೆಡೆ ಸಂಘ ಸಂಸ್ಥೆಗಳು, ಯುವಕರ ಸಂಘಗಳು, ಸ್ವಯಂ ಸೇವಕರು ಹಾಗೂ ಪರಿಸರ ಆಸಕ್ತರು ಶನಿವಾರ ಗಿಡಗಳನ್ನು ನೆಟ್ಟು ಪರಿಸರ ದಿನ ಆಚರಿಸಿದರು. ನೀರಿನ ಸಮಸ್ಯೆ ಮತ್ತು ಬರದ ನಾಡು ಎನಿಸಿರುವ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಹಸಿರೀಕರಣಗೊಳಿಸುವ ಪ‍ಣ ತೊಟ್ಟರು.

ಉಸಿರಿಗಾಗಿ ಹಸಿರು ಸಂಸ್ಥೆ: ತಾಲ್ಲೂಕಿನ ಗುಂತಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಉಸಿರಿಗಾಗಿ ಹಸಿರು ಸಂಸ್ಥೆಯು ಆಯೋಜಿಸಿದ್ದ ಪರಿಸರ ದಿನದ ಕಾರ್ಯಕ್ರಮದಲ್ಲಿ ವಿವಿಧ ಪ್ರಬೇಧದ 130 ಸಸಿಗಳನ್ನು ನೆಡಲಾಯಿತು. 20 ಸಸಿಗಳನ್ನು ಆಸಕ್ತ ಮಕ್ಕಳಿಗೆ ವಿತರಿಸಿದರು.

ಈ ಮಳೆಗಾಲದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ವಿವಿಧ ಶಾಲೆಗಳಲ್ಲಿ 1,000ಕ್ಕೂ ಅಧಿಕ ಸಸಿಗಳನ್ನು ನೆಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ ಎಂದು ಉಸಿರಿಗಾಗಿ ಹಸಿರು ಟ್ರಸ್ಟಿನ ಎನ್.ಗಂಗಾಧರ ರೆಡ್ಡಿ ತಿಳಿಸಿದರು.

ಮುಖ್ಯಶಿಕ್ಷಕ ನರಸಿಂಹಮೂರ್ತಿ ಮಾತನಾಡಿ, ಮರಗಳನ್ನು ಬೆಳೆಸಲು ಅತ್ಯಂತ ವಿಶಾಲವಾದ ಮೈದಾನವನ್ನು ಶಾಲೆ ಹೊಂದಿದೆ. ಆದರೆ ಸೂಕ್ತ ಕಾಂಪೌಡ್ ವ್ಯವಸ್ಥೆ ಇಲ್ಲ. ನೆಟ್ಟ ಎಲ್ಲ ಸಸಿಗಳನ್ನು ಪೋಷಿಸಲು ಕಷ್ಟಸಾಧ್ಯ. ಹೀಗಿದ್ದರೂ ಎಸ್‌ಡಿಎಂಸಿ ‌ಸದಸ್ಯರು ಹಾಗೂ ವಿದ್ಯಾರ್ಥಿಗಳ ಸಹಯೋಗದಲ್ಲಿ ‌ಸಸಿಗಳನ್ನು ಪೋಷಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಕೆ.ಎಸ್. ನವೀನ್ ಕುಮಾರ್, ಟ್ರಸ್ಟಿ ಸದಸ್ಯರಾದ ಸಿ.ಕೆ.ರಾಮಾಂಜಿನಪ್ಪ, ಎಂ. ಅಜಯ್, ಕೆ.ಇ.ಜಗದೀಶ್, ಉಮೇಶ್, ರಮೇಶ್, ಪವನ್, ಪ್ರಕಾಶ್ ಇದ್ದರು.

ಗೆಳೆಯರ ಬಳಗ: ನಗರದ ಕ್ಯಾಂಪಸ್ ಬೆಟ್ಟದಲ್ಲಿ ಸಮಾನ ಮನಸ್ಕ ಗೆಳೆಯರ ತಂಡದ ಸದಸ್ಯರು 25ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು. ಬೆಳಿಗ್ಗೆಯಿಂದೇ ಯುವಕರು ಬೆಟ್ಟದಲ್ಲಿ ಸ್ಥಳಗಳನ್ನು ಗುರುತಿಸಿ ಸಸಿಗಳನ್ನು ನೆಡಲು ಮುಂದಾರು. ಮಧ್ಯಾಹ್ನದ ವೇಳೆ ಗಿಡಗಳನ್ನು ನೆಟ್ಟು ಸಂಭ್ರಮಾಚರಣೆ ಮಾಡಿದರು.

‘ಇಲ್ಲಿ ನೆಟ್ಟ ಗಿಡಗಳನ್ನು ನಾವೇ ನಿರ್ವಹಿಸುತ್ತೇವೆ. ಇದಕ್ಕಾಗಿ ಆಗಾಗ್ಗೆ ಭೇಟಿ ನೀಡು‌ತ್ತೇವೆ’ ಎಂದು ತಂಡ ದರ್ಶನ್ ತಿಳಿಸಿದರು. ವಿನಿತ್, ವಿನ್ಸಂಟ್, ರಘು, ಶಶಿ ಇತರರು ಇದ್ದರು.

ಸುಧಾಕರ್ ಅಭಿಮಾನಿ ಬಳಗ: ಸಚಿವ ಡಾ.ಕೆ. ಸುಧಾಕರ್ ಅಭಿಮಾನಿ ಬಳಗದಿಂದ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಅವರಣದಲ್ಲಿ ಗಿಡನೆಟ್ಟು ಪೊಲೀಸ್ ಸಿಬ್ಬಂದಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಲಾಯಿತು.

ಯುವ ಮುಖಂಡ ಎಸ್.ಪಿ. ಶ್ರೀನಿವಾಸ್ ಮಾತನಾಡಿ, ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಕೆರೆ, ಹಳ್ಳ, ನದಿ, ಸಾಗರ ಇತ್ಯಾದಿಗಳನ್ನು ನಾವು ಉಳಿಸಿಕೊಂಡು ಹೋಗುವುದು ಅತ್ಯಗತ್ಯವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಈ ಪರಿಸರವನ್ನು ಹಾಳು ಮಾಡದೆ ರಕ್ಷಿಸಿಕೊಡಬೇಕು. ಆಗ ಪರಿಸರ ದಿನಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.

ಸಬ್‌ಇನ್‌ಸ್ಪೆಕ್ಟರ್ ಹೊನ್ನೇಗೌಡ, ಮೊಬೈಲ್ ಬಾಬು, ನಗರಸಭಾ ಸದಸ್ಯ ತರಕಾರಿ ವೆಂಕಟೇಶ್, ಯುವ ಮುಖಂಡರಾದ ಬಿ.ವಿ.ಆನಂದ್, ಹರ್ಷವರ್ಧನ್, ವಕೀಲ ಮಹೇಶ್ ಕುಮಾರ್, ಮಹೇಶ್, ರಾಜು ,ಅನಿಲ್, ಸುಭಾನ್ ಮತ್ತಿತರರು ಹಾಜರಿದ್ದರು.

ಶಿಕ್ಷಕರ ಸ್ಮರಣೆ: ಕೋವಿಡ್‌ನಿಂದ ಮೃತಪಟ್ಟ ಶಿಕ್ಷಕರ ಸ್ಮರಣಾರ್ಥ ಪರಿಸರ ದಿನದಲ್ಲಿ ಗಿಡ ನೆಡಲಾಯಿತು. ಜಿಲ್ಲಾ ಗುರುಭವನ, ಜಿಲ್ಲಾಧಿಕಾರಿ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಿಪ್ಪೇನಹಳ್ಳಿ ಶಾಲೆಯ ಸಸಿಗಳನ್ನು ನಡೆಲಾಯಿತು.

ಕಾರ್ಯಕ್ರಮದಲ್ಲಿ ಡಿಎಚ್‌ಒ ಇಂದಿರಾ ಆರ್.‌ಕಬಾಡೆ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಹರೀಶ್, ಬಿಇಒ ಶೋಭಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT