ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮೂರ ತಿಂಡಿ | ಬಾಗೇಪಲ್ಲಿ: ಅಚ್ಚುಮೆಚ್ಚಿನ ಮನ್ನಾನ್ ರೈಸ್

Published 23 ಜೂನ್ 2024, 6:06 IST
Last Updated 23 ಜೂನ್ 2024, 6:06 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ಹೊರವಲಯದ ಟಿ.ಬಿ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿಯ ರಸ್ತೆ 44ರಲ್ಲಿ ಮನ್ನಾನ್ ಹೋಟೆಲ್‌ನಲ್ಲಿ ಪಲಾವ್, ಟೊಮೆಟೊದ ಮನ್ನಾನ್ ರೈಸ್ ಎಂದರೆ ಜನರಿಗೆ ಅಚ್ಚುಮೆಚ್ಚು.

ಟಿ.ಬಿ.ಕ್ರಾಸ್‌ನಲ್ಲಿ ಕಳೆದ 40 ವರ್ಷಗಳ ಹಿಂದೆ ಪಟ್ಟಣದ ಅಬ್ದುಲ್ ಮನ್ನಾನ್ ಎಂಬುವವರು ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಕೆಲಸ ಮಾಡಿಕೊಂಡು ರೈಸ್ ತಯಾರಿಸುವ ಬಗೆ ಕಲಿತುಕೊಂಡಿದ್ದಾರೆ. ಮನ್ನಾನ್ ಹೋಟೆಲ್‌ನಲ್ಲಿ ಇದೀಗ ಬೆಳಗಿನಿಂದ ಮಧ್ಯಾಹ್ನದವರೆಗೆ ರೈಸ್ ಜತೆಗೆ ಚಪಾತಿ, ಇಡ್ಲಿ, ದೋಸೆ, ಮೊಟ್ಟೆದೋಸೆ, ಬಜ್ಜಿ, ಮೊಟ್ಟೆ ದೊರೆಯುತ್ತದೆ.

ಮೊದಲಿಗೆ ಚಪ್ಪರದ ಕೆಳಗೆ ರೈಸ್ ತಯಾರಿಸಿ ಮಾರಾಟ ಮಾಡಿದ್ದರು. ಪಟ್ಟಣದಿಂದ ಟಿ.ಬಿಕ್ರಾಸ್‌ನಲ್ಲಿ ಸ್ವಂತ ಮನೆ ಮಾಡಿಕೊಂಡು, ಮನೆಯ ಮುಂದೆ ದೊಡ್ಡ ಪಾತ್ರೆಯಲ್ಲಿ ಪಲಾವ್, ಟೊಮೆಟೊ ರೈಸ್ ತಯಾರಿಸುತ್ತಾರೆ. ಪ್ರತಿನಿತ್ಯ 100 ಕಿಲೋದಷ್ಟು ರುಚಿಯಾದ ಟೊಮೆಟೊ ರೈಸ್, 500 ಚಪಾತಿ, ಮಸಾಲೆ ದೋಸೆ, ಮೊಟ್ಟೆದೋಸೆ, ಬೇಯಿಸಿದ ಮೊಟ್ಟೆ, ಬಜ್ಜಿ ತಯಾರಿಸುತ್ತಾರೆ. ಪ್ರತಿನಿತ್ಯ ಪಟ್ಟಣದ ಸೇರಿದಂತೆ ಆಂಧ್ರಪ್ರದೇಶದ, ಬೆಂಗಳೂರು ಕಡೆಗೆ ಹೋಗುವವರೂ ಈ ಹೋಟೆಲ್‌ಗೆ ಬರುತ್ತಾರೆ.

ಕೂರಲು, ನಿಲ್ಲಲು ಸ್ಥಳ ಅವಕಾಶ ಇಲ್ಲದ ನಡುವೆಯೂ ಜನರು ಸರತಿಸಾಲಿನಲ್ಲಿ ನಿಂತು ಅನ್ನ, ದೋಸೆ, ಚಪಾತಿ ಸೇವಿಸುತ್ತಾರೆ. ರೈಸ್ ಮತ್ತು ಮೊಟ್ಟೆದೋಸೆಗೆ ಭಾರಿ ಬೇಡಿಕೆ ಇದೆ.

ಪ್ರತಿ ಭಾನುವಾರ ವಿಶೇಷವಾಗಿ ಮನ್ನಾನ್ ರೈಸ್ ಸೇವಿಸಿ, ಕುಟುಂಬದವರಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಪಟ್ಟಣದ ಮಹಬೂಬ್ ಭಾಷ ತಿಳಿಸಿದರು.

ಆಂಧ್ರಪ್ರದೇಶದಿಂದ ಪಟ್ಟಣದ ಮೂಲಕ ಬೆಂಗಳೂರಿಗೆ ಬರುತ್ತೇವೆ. ಮನ್ನಾನ್ ರೈಸ್ ಸೇವಿಸಿ ನಂತರ ಪ್ರಯಾಣ ಮಾಡುತ್ತೇವೆ. ರೈಸ್ ಸೇವಿಸಲು ತುಂಬಾ ಇಷ್ಟ ಎಂದು ಆಂಧ್ರಪ್ರದೇಶದ ರಾಜಶೇಖರರೆಡ್ಡಿ ತಿಳಿಸಿದರು.

40 ವರ್ಷಗಳ ಹಿಂದೆ ತಂದೆ ಚಿಕ್ಕ ಹೋಟೆಲ್ ಮಾಡಿ, ಸ್ವತಃ ಮಾಲೀಕರಾಗಿ, ಕೆಲಸಗಾರರಾಗಿದ್ದರು. ಇದೀಗ ಮನ್ನಾನ್ ರೈಸ್ ಎಂದರೆ ಸ್ಥಳೀಯರು, ನೆರೆಯ ಆಂಧ್ರಪ್ರದೇಶದಿಂದ ಸೇವಿಸಲು ಬರುತ್ತಾರೆ. ಗ್ರಾಹಕರು ಹೆಚ್ಚಾಗಿದ್ದಾರೆ. ಹೋಟೆಲ್‌ನ ತಿಂಡಿ, ತಿನಿಸುಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಅಬ್ದುಲ್ ಮನ್ನಾನ್ ಪುತ್ರ ಸಿಖ್‌ಬತುಲ್ಲಾ (ಹಿದ್ದು) ತಿಳಿಸಿದರು.

ಮನ್ನಾನ್ ರೈಸ್
ಮನ್ನಾನ್ ರೈಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT