ಗೌರಿಬಿದನೂರು: ತಾಲ್ಲೂಕಿನ ವಿವಿಧ ಕಾಮಗಾರಿಗೆ ಶಾಸಕ ಕೆ.ಎಚ್ ಪುಟ್ಟಸ್ವಾಮಿ ಶನಿವಾರ ಭೂಮಿಪೂಜೆ ನೆರವೇರಿಸಿದರು.

ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ₹7.85 ಕೋಟಿ ವೆಚ್ಚದಲ್ಲಿ ನಗರಗೆರೆ ಹೋಬಳಿಯ ಕೃಷ್ಣರಾಜಪುರ ತಾಂಡ, ನಂಜಯ್ಯಗಾರ್ಲಹಳ್ಳಿ, ದೇವಗಾನಹಳ್ಳಿ ಹಾಗೂ ಕಸಬಾ ಹೋಬಳಿಯ ಚಿಕ್ಕಕುರುಗೋಡು, ತೊಂಡೇಬಾವಿ ಹೋಬಳಿಯ ದ್ಯಾವಸಂದ್ರ ಗ್ರಾಮಗಳಲ್ಲಿ ಸಣ್ಣ ನೀರಾವರಿ ಅಡಿಯಲ್ಲಿ ಬರುವ ಹಳ್ಳ, ಕಾಲುವೆ, ಚೆಕ್ ಡ್ಯಾಂ ನಿರ್ಮಾಣ ಮತ್ತು ಕಾಲುವೆಗಳ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಅಂತರ್ಜಲ ಮಟ್ಟ ಏರಿಕೆಯಾಗಿ ರೈತರ ನೂರಾರು ಜಮೀನುಗಳಿಗೆ ನೀರು ಹರಿಯುವುದರಿಂದ ವ್ಯವಸಾಯಕ್ಕೆ ಅನುಕೂಲ. ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ವೆಂಕಟರಾಮರೆಡ್ಡಿ, ವಿಜಯ್ ರಾಘವ್, ಆರ್.ಆರ್.ರೆಡ್ಡಿ, ಲಕ್ಷಣ್ ರಾವ್, ಚಿಕ್ಕಣ್ಣ, ಜಿ.ನಾಗೇಂದ್ರ, ವಿಕ್ರಂ, ಗುತ್ತಿಗೆದಾರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.