ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಬಂಡೆ: ಊರ ಜಾತ್ರೆಯಲ್ಲಿ ದೀಪದಾರತಿ ರಂಗು

Published 12 ಜುಲೈ 2023, 12:30 IST
Last Updated 12 ಜುಲೈ 2023, 12:30 IST
ಅಕ್ಷರ ಗಾತ್ರ

ಸಾದಲಿ: ಪಟ್ಟಣದಲ್ಲಿ ಬುಧವಾರ ಊರಹಬ್ಬ ಹಾಗೂ ಊರ ಜಾತ್ರೆ ಅದ್ದೂರಿಯಾಗಿ, ಶ್ರದ್ಧಾಭಕ್ತಿಯಿಂದ ನಡೆಯಿತು. 

ಸಾದಲಿ ಗ್ರಾಮದಲ್ಲಿ ಹೂವಿನ ಅಲಂಕಾರದಿಂದ ಮಾಡಲಾಗಿದ್ದ ದೀಪಗಳನ್ನು ಹೊತ್ತ ಮಹಿಳೆಯರು ಮಂಗಳ ವಾದ್ಯಗಳೊಂದಿಗೆ ವಿವಿಧ ಭಾಗಗಳಲ್ಲಿ ಮೆರವಣಿಗೆ ನಡೆಸಿದರು. ಸಾದಿಲಮ್ಮ, ಗಂಗಮ್ಮ, ಮಹೇಶ್ವರಿ, ಚೌಡೇಶ್ವರಿ, ದುರ್ಗಾದೇವಿ, ಸಪ್ಪಲಮ್ಮ ಹಾಗೂ ಮುನೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು. 15 ವರ್ಷಗಳ ಬಳಿಕ ದೀಪದ ಮೆರವಣಿಗೆ ನಡೆಯುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು. 

ಈ ದೀಪದ ಮೆರವಣಿಗೆಯಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸೇರಿದಂತೆ ಇನ್ನಿತರ ಮಹನೀಯರ ಚಿತ್ರಗಳು ಗಮನ ಸೆಳೆದವು.

ಯುವಕರು ತಮಟೆಯ ನಾದಕ್ಕೆ ಹೆಜ್ಜೆ ಹಾಕಿದ್ದು, ಮೆರವಣಿಗೆಗೆ ಮೆರುಗು ನೀಡಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 

ಸಾದಲಿ ಗ್ರಾಮದ ವಿವಿಧ ಬೀದಿಗಳಲ್ಲಿ ದೀಪದ ಮೆರವಣಿಗೆ ನಡೆಯಿತು 
ಸಾದಲಿ ಗ್ರಾಮದ ವಿವಿಧ ಬೀದಿಗಳಲ್ಲಿ ದೀಪದ ಮೆರವಣಿಗೆ ನಡೆಯಿತು 
ಸಾದಲಿಯಲ್ಲಿ ಊರ ಜಾತ್ರೆ ಪ್ರಯುಕ್ತ ಮಹಿಳೆಯರು ದೀಪಗಳನ್ನು ಹೂತ್ತು ಗ್ರಾಮ ದೇವರುಗಳಿಗೆ ಪೂಜೆ ಸಲ್ಲಿಸಿದರು.
ಸಾದಲಿಯಲ್ಲಿ ಊರ ಜಾತ್ರೆ ಪ್ರಯುಕ್ತ ಮಹಿಳೆಯರು ದೀಪಗಳನ್ನು ಹೂತ್ತು ಗ್ರಾಮ ದೇವರುಗಳಿಗೆ ಪೂಜೆ ಸಲ್ಲಿಸಿದರು.
ಸಾದಲಿ ಗ್ರಾಮ ವಿವಿಧ ಬೀದಿಗಳಲ್ಲಿ ಮಹಿಳೆಯರು ದೀಪಗಳನ್ನು ಹೊತ್ತು ನಡೆದರು
ಸಾದಲಿ ಗ್ರಾಮ ವಿವಿಧ ಬೀದಿಗಳಲ್ಲಿ ಮಹಿಳೆಯರು ದೀಪಗಳನ್ನು ಹೊತ್ತು ನಡೆದರು
ಸಾದಲಿ ಗ್ರಾಮ ವಿವಿಧ ಬೀದಿಗಳಲ್ಲಿ ಮಹಿಳೆಯರು ದೀಪಗಳನ್ನು ಹೊತ್ತು ನಡೆದರು
ಸಾದಲಿ ಗ್ರಾಮ ವಿವಿಧ ಬೀದಿಗಳಲ್ಲಿ ಮಹಿಳೆಯರು ದೀಪಗಳನ್ನು ಹೊತ್ತು ನಡೆದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT