ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗೇಪಲ್ಲಿ: ಶಾಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ

Published : 28 ಮಾರ್ಚ್ 2024, 13:39 IST
Last Updated : 28 ಮಾರ್ಚ್ 2024, 13:39 IST
ಫಾಲೋ ಮಾಡಿ
Comments

ಬಾಗೇಪಲ್ಲಿ: ಪಟ್ಟಣದ ಬಾಲಕಿಯರ ಸರ್ಕಾರಿ ಶಾಲಾವರಣದಲ್ಲಿ ಪಿಎಂಶ್ರೀ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಿಗೆ ಗುರುವಾರ ಆರೋಗ್ಯ ತಪಾಸಣೆ ನಡೆಸಲಾಯಿತು.

ಶಾಲೆಯ ಮುಖ್ಯಶಿಕ್ಷಕ ಆರ್.ಹನುಮಂತರೆಡ್ಡಿ ಮಾತನಾಡಿ, ಶಾಲೆಯಲ್ಲಿ ಶೈಕ್ಷಣಿಕ ಹಾಗೂ ಮಕ್ಕಳ ಆರೋಗ್ಯ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿನಿಯರಿಗೆ ಆರೋಗ್ಯ, ಸ್ವಚ್ಛತೆ ಹಾಗೂ ದೇಹದಲ್ಲಿನ ವಿವಿಧ ಆರೋಗ್ಯದ ಸಮಸ್ಯೆಗಳಿಗೆ ವೈದ್ಯರಿಂದ ತಪಾಸಣೆ, ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ಮಾತನಾಡಿ, ವಿದ್ಯಾರ್ಥಿನಿಯರಲ್ಲಿ ಪೌಷ್ಟಿಕಾಂಶ, ರಕ್ತದ ಕೊರತೆ ಇದೆ. ಆರೋಗ್ಯದ ತಪಾಸಣೆ ಮಾಡಲಾಗಿದೆ. ವಿದ್ಯಾರ್ಥಿನಿಯರಲ್ಲಿ ಸ್ವಚ್ಛತೆ ಕಡಿಮೆ ಇರುವುದರಿಂದ, ಸ್ವಚ್ಛತೆ ಕಾಪಾಡಬೇಕು. ಪ್ಲೋರೊಸಿಸ್ ರೋಗ ಹೆಚ್ಚಾಗಿದೆ. ಆರೋಗ್ಯದ ತಪಾಸಣೆ ಮಾಡಿ, ಸೂಕ್ತ ಔಷಧಿ ವಿತರಿಸಲಾಗಿದೆ ಎಂದರು.

ಡಾ.ಐಶ್ವರ್ಯ, ಡಾ.ಸೌಭಾಗ್ಯ, ಡಾ.ಸ್ವರೂಪ್, ಡಾ.ರಾಜ್ ಚೌಹಾಣ್, ಕ್ಷೇತ್ರ ಸಮಯನ್ವಾಧಿಕಾರಿ ಆರ್.ವೆಂಕಟರಾಂ, ಶಿಕ್ಷಕ ವೈ.ಎಂ.ಮಂಜುನಾಥ್, ಪ್ರಭಾವತಿ, ಧರ್ಮಪುತ್ರಿ, ಬೇಬಿ ಮಮತಾಜ್, ಭಾರ್ಗವಿ, ಪದ್ಮಜ, ಕಲ್ಪನ, ರಾಧಿಕಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT