ಮಂಗಳವಾರ, ಅಕ್ಟೋಬರ್ 19, 2021
22 °C

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಧಾರಾಕಾರ ಮಳೆ, ಉಕ್ಕಿ ಹರಿದ ಉತ್ತರ ಪಿನಾಕಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಸೇರಿದಂತೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಮಳೆ ಆರಂಭವಾಗಿದೆ. 

ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಕೆರೆ, ಕಟ್ಟೆ, ಜಲಾಶಯಗಳು ತುಂಬಿವೆ.

ಗೌರಿಬಿದನೂರು ತಾಲ್ಲೂಕಿನ ಉತ್ತರ ಪಿನಾಕಿನಿ ನದಿ ಉಕ್ಕಿ ಹರಿಯುತ್ತಿದೆ. ತಾಲ್ಲೂಕಿನಲ್ಲಿ ದೊಡ್ಡಕೆರೆಗಳು ಎನಿಸಿರುವ ಮಂಚೇನಹಳ್ಳಿ, ದಂಡಿಗಾನಹಳ್ಳಿ ಕೆರೆಗಳಿಗೆ ನೀರಿನ ಹರಿವು ಹೆಚ್ಚಿದೆ.

 ಚಿಕ್ಕಬಳ್ಳಾಪುರ ತಾಲ್ಲೂಕಿನ ಶ್ರೀನಿವಾಸ ಸಾಗರ, ಜಕ್ಕಲಮಡುಗು ಜಲಾಶಯ ಭರ್ತಿಯಾಗಿವೆ. ಕಳೆದ ತಿಂಗಳು ಮಳೆ ಸುರಿದ ಸಂದರ್ಭದಲ್ಲಿಯೂ ಇವು ಭರ್ತಿಯಾಗಿದ್ದವು.

ಗುಡಿಬಂಡೆ ಅಮಾನಿಬೈರ ಸಾಗರ ಕೆರೆಯ ಕೋಡಿ ಹರಿದಿದೆ. ಬಾಗೇಪಲ್ಲಿ ತಾಲ್ಲೂಕಿನ‌ ಮಾಡಪ್ಪಲ್ಲಿ ಕೆರೆ ತುಂಬಿದ್ದು ಮಾಡಪಲ್ಲಿಯಲ್ಲಿ ಮನೆಯೊಂದು ಕುಸಿದಿದೆ. ಯಾರಿಗೂ ಅಪಾಯವಾಗಿಲ್ಲ.

ಮಳೆಯಿಂದ ಶಿಡ್ಲಘಟ್ಟ ತಾಲ್ಲೂಕು ಕಚೇರಿ ಸೋರುತ್ತಿದೆ. ಅಧಿಕಾರಿಗಳು ಕಚೇರಿ, ಆವರಣದಲ್ಲಿ ನೀರಿದೆ. ಚಿಂತಾಮಣಿ ತಾಲ್ಲೂಕಿನ‌ ಪ್ರಸಿದ್ಧ ಮುರುಗಮಲೆ ದರ್ಗಾ ಆವರಣದಕ್ಕೆ ನೀರು ನುಗ್ಗಿದ್ದು ಭಕ್ತರು ಪರದಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು