ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣು, ತರಕಾರಿ ಮಾರಾಟಕ್ಕೆ ಸಹಾಯವಾಣಿ

Last Updated 23 ಏಪ್ರಿಲ್ 2020, 13:58 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಜಿಲ್ಲಾಡಳಿತ ಸಹಾಯವಾಣಿ ಆರಂಭಿಸಿದೆ.

ತೋಟಗಾರಿಕೆ ಬೆಳೆ ಬೆಳೆದಿರುವ ರೈತರು, ತಾವು ಬೆಳೆದ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು, ಮಾರುಕಟ್ಟೆ ವಿವರ, ಮಾರುಕಟ್ಟೆಯ ಪ್ರಸ್ತುತ ದರ, ನೇರವಾಗಿ ರೈತರಿಂದ ಗ್ರಾಹಕರಿಗೆ ಮಾರಾಟ ಮಾಡಲು ಮತ್ತು ಬೆಳೆವಾರು ಲಭ್ಯವಿರುವ ಖರೀದಿದಾರರ ವಿವರಗಳನ್ನು ತಿಳಿದುಕೊಳ್ಳಲು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಸ್‌.ಆರ್.ಕುಮಾರಸ್ವಾಮಿ (9448999242), ತಾಲ್ಲೂಕುವಾರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಸಹಾಯವಾಣಿಗಳ ವಿವರ ಇಂತಿದೆ.. ಚಿಕ್ಕಬಳ್ಳಾಪುರ ಬಿ.ಎಸ್ ಭಾಗ್ಯಲಕ್ಷ್ಮಮ್ಮ (8310136324) , ಚಿಂತಾಮಣಿ ಆರ್.ರಜನಿ (9353455389), ಗೌರಿಬಿದನೂರು ರವಿಕುಮಾರ್ (9141001257, 9964749681), ಶಿಡ್ಲಘಟ್ಟ ರಮೇಶ್‌ (8073334003), ಬಾಗೇಪಲ್ಲಿ ಈಶ್ವರಪ್ಪ (9945244370), ಗುಡಿಬಂಡೆ ರವಿಕುಮಾರ್ (9141001257, 9964749681).

ಎಪಿಎಂಸಿ ಕಾರ್ಯದರ್ಶಿಗಳ ಸಹಾಯವಾಣಿಗಳು ಚಿಕ್ಕಬಳ್ಳಾಪುರ –9342547825, ಬಾಗೇಪಲ್ಲಿ –9342547825, ಚಿಂತಾಮಣಿ – 9902775141, ಗೌರಿಬಿದನೂರು 9886079728.

ಕಾರ್ಮಿಕರ ಸಹಾಯಧನಕ್ಕೆ ದಾಖಲೆ ಸಲ್ಲಿಸಿ
ಚಿಕ್ಕಬಳ್ಳಾಪುರ:
ಕೊರೊನಾ ಸೃಷ್ಟಿಸಿದ ಬಿಕ್ಕಟ್ಟಿಗೆ ಸಿಲುಕಿ ಸಂಕಷ್ಟದಲ್ಲಿರುವ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜೀವನ ನಿರ್ವಹಣೆಗಾಗಿ ಕಾರ್ಮಿಕರ ಖಾತೆಗೆ ಕಾರ್ಮಿಕ ಇಲಾಖೆಯು ತಲಾ ₹2,000 ಸಹಾಯಧನ ಖಾತೆಗೆ ಜಮೆ ಮಾಡಲಿದೆ.

ಈ ಸಹಾಯಧನದ ಪ್ರಯೋಜನ ಪಡೆಯಲು ಬಯಸುವ ನೋಂದಾಯಿತ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ತಮ್ಮ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಬ್ಯಾಂಕ್ ಹೆಸರು, ಬ್ಯಾಂಕ್ ಖಾತೆಯ ಸಂಖ್ಯೆ, ಐ.ಎಫ್.ಎಸ್.ಸಿ. ಕೋಡ್ ಸಂಖ್ಯೆಯನ್ನು ಹೊಂದಿರುವ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿಯ ದಾಖಲೆಗಳನ್ನು ನೊಂದಣಿಯಾಗಿರುವ ಆಯಾ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಸಲ್ಲಿಸಬೇಕು ಅಥವಾ ಕಾರ್ಮಿಕ ನಿರೀಕ್ಷಕರ ವ್ಯಾಟ್ಸ್ ಆ್ಯಪ್ ನಂಬರಿಗೆ ಕಳುಹಿಸಿ ಕೊಡಬೇಕು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಜಿಲ್ಲೆಯ ತಾಲ್ಲೂಕುಗಳ ಕಾರ್ಮಿಕ ನಿರೀಕ್ಷಕರ ವಿವರ ಇಂತಿದೆ.. ರಾಮಾಂಜಿನಪ್ಪ ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ (ಪ್ರಭಾರ) –8310249764, ಜೆ.ವಿ.ಕಲಾವಾಣಿ ಚಿಂತಾಮಣಿ, ಬಾಗೇಪಲ್ಲಿ ಮತ್ತು ಗೌರಿಬಿದನೂರು (ಪ್ರಭಾರ)– 9886538344.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT