ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾ ಕೇಂದ್ರದಲ್ಲಿ ಹಾವು: ತಪ್ಪು ಮಾಹಿತಿಯ ದೂರು–ಸ್ಪಷ್ಟನೆ

Last Updated 18 ಅಕ್ಟೋಬರ್ 2022, 6:08 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:ಈಶಾ ಯೋಗಕೇಂದ್ರದ ಕಾರ್ಯಕ್ರಮದಲ್ಲಿಕೇರೆ ಹಾವು ಕೈಯಲ್ಲಿ ಹಿಡಿದು ಪ್ರದರ್ಶಿಸಿದ ಈಶಾ ಫೌಂಡೇಶನ್‌ನ ಜಗ್ಗಿ ವಾಸುದೇವ್ ವಿರುದ್ಧ ಕ್ರಮ ಜರುಗಿಸುವಂತೆ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ (ಎಸ್‌ಪಿಸಿಎ) ಜಿಲ್ಲಾ ಸಮಿತಿ ಸದಸ್ಯ ಸಿ.ಎನ್.ಪೃಥ್ವಿರಾಜ್ ಅವರು ಚಿಕ್ಕಬಳ್ಳಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ನೀಡಿದ ದೂರಿನ ಬಗ್ಗೆ ಈಶಾ ಯೋಗ ಕೇಂದ್ರ ಸ್ಪಷ್ಟನೆ ನೀಡಿದೆ.

ತಾಲ್ಲೂಕಿನಈಶಾ ಯೋಗ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಜಗ್ಗಿ ವಾಸುದೇವ್ ಅವರು ಹಾವನ್ನು ಪ್ರದರ್ಶಿಸಿದ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಅರಣ್ಯಾಧಿಕಾರಿಗೆ ತಪ್ಪು ಮಾಹಿತಿಯಿಂದ ಕೂಡಿದ ದೂರು ನೀಡಲಾಗಿದೆ ಎಂದು ಅದು ಭಾನುವಾರ ಹೇಳಿದೆ.

ಯೋಗ ಕೇಂದ್ರದಲ್ಲಿ ನಾಗ ಪ್ರತಿಷ್ಠೆ ಕಾರ್ಯಕ್ರಮದ ವೇಳೆ ಹಾವು ಕಾಣಿಸಿಕೊಂಡಿತ್ತು. ಸ್ವಯಂಸೇವಕರೊಬ್ಬರು ಅದನ್ನು ಸದ್ಗುರು ಗಮನಕ್ಕೆ ತಂದರು. ಅವರು ಅದನ್ನು ಸೌಮ್ಯವಾಗಿ ನೋಡಿಕೊಂಡು ನಂತರ ಹತ್ತಿರದ ಕಾಡಿಗೆ ಸುರಕ್ಷಿತವಾಗಿ ಬಿಡುವಂತೆ ಹೇಳಿದರು. ಹಾವಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ. ಈ ಬಗ್ಗೆ ಸ್ಥಳದಲ್ಲಿದ್ದ ಪೊಲೀಸರಿಗೆ ಅರಿವಿತ್ತು.

‘ಹಾವುಗಳ ಕುರಿತಾದ ತಪ್ಪು ಕಲ್ಪನೆ ತೊಡೆದುಹಾಕಲು ಮತ್ತು ಸಂರಕ್ಷಣೆ ಉತ್ತೇಜಿಸಲು ಈ ರೀತಿ ಮಾಡಿದರು. ಹಾವು ಸೌಮ್ಯ ಜೀವಿ ಮತ್ತು ಅದನ್ನು ನೋಯಿಸಬಾರದು ಎಂದು
ಹೇಳಿದರು. ಹಾವುಗಳನ್ನು ನಕಾರಾತ್ಮಕವಾಗಿ ನೋಡಲಾಗುತ್ತದೆ. ಆದರೆ ನಾವು ದಾಳಿ ಮಾಡದ ಹೊರತು ಅವು ನಮಗೆ ಹಾನಿ ಉಂಟು ಮಾಡುವುದಿಲ್ಲ. ಮನುಷ್ಯ ಅದರ ಆಹಾರವಲ್ಲ ಎಂದು ನೆರೆದವರಿಗೆ ಮನವರಿಕೆ ಮಾಡಿದರು’ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT