ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ನಿರ್ನಾಮ ಸಾಧ್ಯವಿಲ್ಲ: ಎಚ್.ಡಿ. ದೇವೇಗೌಡ

ವಿಧಾನ ಪರಿಷತ್ ಚುನಾವಣೆ; ಶಿಡ್ಲಘಟ್ಟ ಕ್ಷೇತ್ರದಲ್ಲಿ ಎಚ್‌.ಡಿ.ದೇವೇಗೌಡ ಮತಯಾಚನೆ
Last Updated 2 ಡಿಸೆಂಬರ್ 2021, 14:17 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜೆಡಿಎಸ್ ನಿರ್ನಾಮ ಯಾರಿಂದಲೂ ಸಾಧ್ಯವಿಲ್ಲ. ರೈತರು, ಬಡವರ ಪರವಾಗಿ ಪಕ್ಷಹೋರಾಡುತ್ತಿದೆ’ ಎಂದು ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದಲ್ಲಿ ಗುರುವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ನಮ್ಮ ‍ಪಕ್ಷದ ಅಭ್ಯರ್ಥಿ ವಕ್ಕಲೇರಿ ರಾಮು ಅವರು ರೈತ ಕುಟುಂಬದ ಹಿನ್ನೆಲೆಯವರು. ಕೋಲಾರ ವಿಧಾನಸಭಾ ಕ್ಷೇತ್ರದಿಂದ ಅವರಿಗೆ ಪಕ್ಷವು ಟಿಕೆಟ್ ನೀಡಿತ್ತು. ಅವರ ಬದಲಿಗೆ ಮತ್ತೊಬ್ಬರಿಗೆ ಟಿಕೆಟ್ ನೀಡಿದಾಗ ಅವರು ಬಿ ಫಾರಂ ವಾಪಸ್ ನೀಡಿದರು. ಅವರು ಪಕ್ಷ ನಿಷ್ಠರು’ ಎಂದು ಹೇಳಿದರು.

ಈ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ತಮ್ಮ ಬಳಿ ಇಷ್ಟು ಮತಗಳಿವೆ, ಅಷ್ಟು ಮತಗಳಿವೆ ಎಂದು ಹೇಳಿಕೊಳ್ಳುತ್ತಿವೆ. ಆದರೆ ರಾಮು ಅವರು ರೈತ ಕುಟುಂಬದ ಸಾಮಾನ್ಯ ಅಭ್ಯರ್ಥಿ. ಈ ದೃಷ್ಟಿಯಿಂದ ಪಕ್ಷಬೇಧ ಮರೆತು ಎಲ್ಲರೂ ಅವರನ್ನು ಬೆಂಬಲಿಸಬೇಕು ಎಂದು ಕೋರಿದರು.

‘ನಾನು ರೈತರ ಪರ. ಪಕ್ಷಕ್ಕೆ ಮಸಿ ಬಳಿಯಲು ಯಾರಿಂದಲೂ ಸಾಧ್ಯವಿಲ್ಲ. ಜಮೀರ್‌ನನ್ನು ಗೆಲ್ಲಿಸಿದ್ದು ದೇವೇಗೌಡ. ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದ್ದು ನಾನು. ಮೀರಾಜುದ್ದೀನ್ ಪಟೇಲ್, ಸಿ.ಎಂ.ಇಬ್ರಾಹಿಂ ಸೇರಿದಂತೆ ಬಹಳಷ್ಟು ಅಲ್ಪಸಂಖ್ಯಾತರಿಗೆ ಅಧಿಕಾರ ಕೊಟ್ಟೆ’ ಎಂದರು.

‘ದೇಶದ ರಾಜಕಾರಣಕ್ಕೆ ದೇವೇಗೌಡರ ಕೊಡುವೆ ಏನು ಎನ್ನುವ ಬಗ್ಗೆ ಡಿ.13ರಂದು ಬಿಡುಗಡೆ ಆಗಲಿರುವ ನನ್ನ ಬಗೆಗಿನ ಪುಸ್ತಕದಿಂದ ತಿಳಿಯಲಿದೆ. ಪುಸ್ತಕ ಇಂಗ್ಲಿಷ್‌ನಲ್ಲಿದ್ದು ಮೂರು ತಿಂಗಳ ನಂತರ ಕನ್ನಡದ ಆವತರಣಿಕೆ ಬರಲಿದೆ. ಪುಸ್ತಕವನ್ನು ಎಲ್ಲರೂ ಓದಬೇಕು’ ಎಂದು ಹೇಳಿದರು.

‘ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿ ಎಂದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಬಳಿಗೆ ಹೋಗಿರಲಿಲ್ಲ. ಅವರೇ ಬಂದರು. ಐದು ವರ್ಷ ರಾಜ್ಯವಾಳಿ ಎಂದರು.ಕುಮಾರಸ್ವಾಮಿ ರೈತರ ₹25 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಸಿದ್ದರಾಮಯ್ಯ ನಮ್ಮ ಆಡಳಿತದ ಎಲ್ಲ ‘ಭಾಗ್ಯ’ಗಳನ್ನು ಮುಂದುವರಿಸಿ ಎಂದರು. ಆ ನಂತರ ನಮ್ಮ ಪಕ್ಷವನ್ನೇ ಮುಗಿಸಲು ನೋಡಿದರು’ ಎಂದು ಹೇಳಿದರು.

ಪಕ್ಷದ ಅಭ್ಯರ್ಥಿ ವಕ್ಕಲೇರಿ‌ ರಾಮು, ಎರಡೂ ಜಿಲ್ಲೆಯ ಮತದಾರರು ಹೆಚ್ಚಿನ ಮತಗಳನ್ನು ನೀಡಿ ಪರಿಷತ್‌ಗೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ, ಪಕ್ಷದ ಮುಖಂಡರು, ಕಾರ್ಯಕರ್ತರು ಪಂಚಾಯಿತಿ ಸದಸ್ಯರ ಮನವೊಲಿಸಿ ಮತ ಕೇಳಬೇಕು. ಕುಮಾರಸ್ವಾಮಿ ಅವರು ಅಧಿಕಾರದಲ್ಲಿ ಇದ್ದಾಗ ಆಶ್ರಯ ಯೋಜನೆಯಡಿ ಹೆಚ್ಚು ಮನೆಗಳನ್ನು ನೀಡಿದರು. ಆದರೆ ಈಗ ಅಭಿವೃದ್ಧಿ ಕಾರ್ಯಗಳೇ ಇಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಮುಖಂಡರಾದ ನರಸಿಂಹಮೂರ್ತಿ, ಧನಂಜಯರೆಡ್ಡಿ, ಮೇಲೂರು ಮಂಜುನಾಥ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT