ಸೋಮವಾರ, ಮೇ 16, 2022
30 °C

ಮಾ. 11ಕ್ಕೆ ಕಬಡ್ಡಿ ಪಂದ್ಯಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ತಾಲ್ಲೂಕಿನ ಕಡದನಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕಾಲಮಡುಗು ಗ್ರಾಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮಾರ್ಚ್‌ 11ರಂದು ರಾಜ್ಯಮಟ್ಟದ ಕಬಡ್ಡಿ ಟೂರ್ನಿ ಆಯೋಜಿಸಲಾಗಿದೆ.

ಪ್ರಥಮ ಬಹುಮಾನ ₹ 22,222, ದ್ವಿತೀಯ ಬಹುಮಾನ ₹ 11,111 ನೀಡಲಾಗುವುದು. ಆಸಕ್ತ ತಂಡಗಳು ಆ ದಿನ ಮಧ್ಯಾಹ್ನ 2 ಗಂಟೆಯ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. 

ಪ್ರತಿ ತಂಡಕ್ಕೂ ಪ್ರವೇಶ ಶುಲ್ಕ ₹ 999 ನಿಗದಿಪಡಿಸಲಾಗಿದೆ. ಪಂದ್ಯಗಳಲ್ಲಿ ಅಂಪೈರ್ ತೀರ್ಮಾನವೇ ಅಂತಿಮವಾದುದು. ಪಂದ್ಯದಲ್ಲಿ ಗಲಾಟೆಯಾದಲ್ಲಿ ಸಂಬಂಧಿಸಿದ 2 ತಂಡಗಳನ್ನು ವಜಾಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ಪ್ರವೇಶ ಶುಲ್ಕ ವಾಪಸ್ ನೀಡುವುದಿಲ್ಲ. ಒಂದು ತಂಡದಲ್ಲಿ ಆಡಿದ ಆಟಗಾರರು ಮತ್ತೊಂದು ತಂಡದಲ್ಲಿ ಆಡಲು ಅವಕಾಶವಿಲ್ಲ. ತಂಡದ ಎಲ್ಲ ಸದಸ್ಯರು ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿ ನೀಡಬೇಕು.

ಹೆಚ್ಚಿನ ಮಾಹಿತಿಗೆ ಮೊಬೈಲ್ 90365 90171 ಅಥವಾ 96113 72839 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು