ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸರ ಸಾಹಿತ್ಯದ ಕೊಡುಗೆ ಅಪಾರ: ರುದ್ರೇಶಮೂರ್ತಿ

Published 30 ನವೆಂಬರ್ 2023, 14:18 IST
Last Updated 30 ನವೆಂಬರ್ 2023, 14:18 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ವ್ಯಾಸರಾಯರ ಶಿಷ್ಯರಾದ ಕನಕದಾಸರು ಭಾಗವತ ದೃಷ್ಟಿಯ ಕವಿ, ಕೀರ್ತನಕಾರ. ಅವರ ಕೀರ್ತನೆಗಳು ಭಾವಗೀತೆಗಳಂತೆ ಮೂಡಿಬಂದಿವೆ ಎಂದು ಮುಖ್ಯಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ತಿಳಿಸಿದರು.

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕವಾಗಿ ಕೆಳವರ್ಗದಿಂದ ಬಂದು ದಾಸದೀಕ್ಷೆ ಪಡೆದು ದಾಸಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ಹೊಸ ಆಯಾಮವನ್ನು ದೊರಕಿಸಿಕೊಟ್ಟರು. ಅವರು ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದರು.

ವಿದ್ಯಾರ್ಥಿನಿ ಎಸ್.ಎನ್.ವಿದ್ಯಾ ಮಾತನಾಡಿ, ಕನಕದಾಸರ ಕೃತಿಗಳಲ್ಲಿ ಮೌಢ್ಯತೆ, ಕಂದಾಚಾರ, ಪೊಳ್ಳುನಂಬಿಕೆ, ವರ್ಣವ್ಯವಸ್ಥೆಯನ್ನು ಖಂಡಿಸಿರುವುದಲ್ಲದೇ ದೈವಭಕ್ತಿ, ಜೀವನದರ್ಶನ, ಸಮಾಜವಿಮರ್ಶೆ, ಲೋಕಾನುಭವಗಳು ಕಾವ್ಯಾತ್ಮಕವಾಗಿ ಹೊರಹೊಮ್ಮಿವೆ ಎಂದರು.

ವಿದ್ಯಾರ್ಥಿಗಳಾದ ಎಂ.ಮೇಘನಾ, ಶಿವಮಣಿ, ಶ್ರವಂತ್ ಮಾತನಾಡಿದರು. ವಿದ್ಯಾರ್ಥಿಗಳಿಂದ ಕನಕದಾಸ ರಚಿತ ಕೀರ್ತನೆಗಳ ಗಾಯನ ನಡೆಯಿತು.

ಎಸ್‌.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ್, ಸದಸ್ಯ ಎಸ್.ಎಲ್.ನಾರಾಯಣಸ್ವಾಮಿ, ಸದಸ್ಯೆ ಶೋಭಾಮಂಜುನಾಥ್, ಗ್ರಾಮಪಂಚಾಯಿತಿ ಸದಸ್ಯ ಎ.ಸತೀಶ್‌ಕುಮಾರ್, ಎಂ.ನಾಗರಾಜು, ಗುತ್ತಿಗೆದಾರ ಶಿವಶಂಕರಪ್ಪ, ಎಂ.ದೇವರಾಜು, ನಿವೃತ್ತ ನೌಕರ ಪೂಜಾರಪ್ಪ, ಮೆಹಬೂಬ್‌ ಪಾಷಾ, ಆರತಿ, ಅಂಗನವಾಡಿ ಶಿಕ್ಷಕಿ ಜಯಂತಿ, ಮಂಜುಳಮ್ಮ, ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಶಿಕ್ಷಕಿ ತಾಜೂನ್, ಆಶಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT