ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತರ ತಾಣವಾದ ಕಸಾಪ: ರಾಜಶೇಖರ ಮುಲಾಲಿ ಆರೋಪ

ಕಸಾಪ ಚುನಾವಣೆ; ರಾಜಶೇಖರ ಮುಲಾಲಿ ಆರೋಪ
Last Updated 18 ಮಾರ್ಚ್ 2021, 15:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕನ್ನಡ ಸಾಹಿತ್ಯ ಪರಿಷತ್ ನಿವೃತ್ತ ಅಧಿಕಾರಿಗಳ ತಾಣವಾಗಿದೆ. ಪಕ್ಷ, ಜಾತಿ ಪ್ರಭಾವಗಳನ್ನು ಬಳಸಿಕೊಂಡು ಇಲ್ಲಿಗೆ ಬಂದು ಕೂರುತ್ತಿದ್ದಾರೆ’ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರಾಜಶೇಖರ ಮುಲಾಲಿ ದೂರಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷ, ಜಾತಿ ಮತ್ತು ಪ್ರಭಾವ ಬಳಸಿಕೊಂಡು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ನಿಜವಾದ ಹೋರಾಟಗಾರರಿಗೆ ಸಮಸ್ಯೆಗಳ ಅರಿವು ಇರುತ್ತದೆ. ಆದ್ದರಿಂದ ಯುವಕನಾದ ನನ್ನನ್ನು ಬೆಂಬಲಿಸುವ ವಿಶ್ವಾಸ ಇದೆ’ ಎಂದು ಅವರು ಹೇಳಿದರು.

‘ಆರ್‌ಎಸ್‌ಎಸ್ ರಾಷ್ಟ್ರದ ದೊಡ್ಡ ಸಂಘಟನೆ. ಇಂತಹ ಸಂಘಟನೆಯ ಪದಾಧಿಕಾರಿಗಳು ಸಂಘದ ಹೆಸರು ಹೇಳಿಕೊಂಡು ಕೆಲವು ಆಕಾಂಕ್ಷಿಗಳ ಪರವಾಗಿ ಮತ ಕೇಳುತ್ತಿದ್ದಾರೆ. ಅವರು ವೈಯಕ್ತಿಕವಾಗಿ ಮತ ಕೇಳಲು ತಪ್ಪಿಲ್ಲ. ಆದರೆ ಅವರು ಸಂಘದ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ತಪ್ಪು. ನಾನು ಈ ವಿಚಾರವನ್ನು ಸಂಘದ ಪ್ರಮುಖರ ಗಮನಕ್ಕೆ ತಂದಿದ್ದೇನೆ’ ಎಂದರು.

‘ಯಾವುದೇ ಒಂದು ಸಂಸ್ಥೆ ಕಾರ್ಯಕ್ರಮ ನಡೆಸಿದಾಗ ಆ ಸಂಸ್ಥೆಯ ಪದಾಧಿಕಾರಿಗಳ ಜತೆ ಭಾವಚಿತ್ರ ತೆಗೆಸಿಕೊಳ್ಳುವುದು ಸಹಜ. ಈ ಚಿತ್ರಗಳನ್ನೇ ಮುಂದಿಟ್ಟುಕೊಂಡು ಅವರ ಬೆಂಬಲ ನಮಗೆ ಇದೆ. ಬೆಂಬಲಿಸಿ ಎಂದು ಮತ ಕೇಳುವುದು ಅಕ್ಷಮ್ಯ’ ಎಂದು ಹೇಳಿದರು.

‘ನಾನು 29 ಬರಹಗಾರರ ಕೃತಿಗಳನ್ನು ಹೊರ ತಂದಿದ್ದೇನೆ. 7 ಸಾವಿರ ಮತದಾರರನ್ನು ನೋಂದಣಿ ಮಾಡಿಸಿದ್ದೇನೆ. ಸಮುದಾಯದ ಪ್ರಮುಖರು, ಪರಿಚಿತರು, ಸ್ನೇಹಿತರು 30 ಸಾವಿರ ಮತಗಳು ಇವೆ. ಈ ಎಲ್ಲ ವಿಶ್ವಾಸಗಳಿಂದ ನಾನು ಸ್ಪರ್ಧೆಯಲ್ಲಿ ಇದ್ದೇನೆ’ ಎಂದು ಹೇಳಿದರು.

‘ನಾನು ಯಾವುದೇ ಪಕ್ಷದ ಸದಸ್ಯನಲ್ಲ. ಯಾವ ಪಕ್ಷದಲ್ಲಿಯೂ ಗುರುತಿಸಿಕೊಂಡಿಲ್ಲ. ಇನ್ನೂ ಚುನಾವಣೆ ಆರಂಭದಲ್ಲಿಯೇ ಹಣ ಮತ್ತು ಮದ್ಯದ ಹೊಳೆ ಹರಿದಿದೆ. ಇದು ತಪ್ಪು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT