ಮಂಗಳವಾರ, ಮೇ 17, 2022
23 °C

ಮಾಚಿದೇವರ ತತ್ವ ಅರಿಯಿರಿ: ತಹಸೀಲ್ದಾರ್ ಎಂ.ರಾಜಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ‘ಮಡಿವಾಳ ಮಾಚಿದೇವರ ಆದರ್ಶಗಳನ್ನು ನಾವು ಮೈಗೊಡಿಸಿಕೊಳ್ಳುವುದು ಅನಿವಾರ್ಯತೆ ಇದ್ದು, ಸಮಾಜಕ್ಕೆ ಅವರು ನೀಡಿದ ಕೊಡುಗೆ ಮತ್ತು ತತ್ವ, ಸಿದ್ಧಾಂತಗಳ ಬಗ್ಗೆ ಅರಿತು ಬಾಳಬೇಕಾಗಿದೆ’ ಎಂದು ತಹಸೀಲ್ದಾರ್ ಎಂ.ರಾಜಣ್ಣ ತಿಳಿಸಿದರು.

ನಗರದ ಹೊರವಲಯದ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಮಾಡಿವಾಳ ಮಾಚೀದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಬಾರಿ ಕೋವಿಡ್-19ರ ಹಿನ್ನೆಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಮಡಿವಾಳ ಮಾಚಿದೇವ ಅಂದಿನ ಕಾಲಘಟ್ಟದಲ್ಲಿ ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಅನನ್ಯವಾಗಿದೆ, ಇಂದಿನ ಯುವ ಪೀಳಿಗೆ ಇಂತಹ ಮಹಾನ್ ‌ಪುರುಷರ ಆದರ್ಶ ಮಾರ್ಗ
ದಲ್ಲೇ ಸಾಗಬೇಕಾಗಿದೆ ಎಂದು ಹೇಳಿದರು.

ಸಮಾಜದ ಮುಖಂಡ ಗಿರಿಧರ್ ಮಾತನಾಡಿ, ಮಡಿವಾಳ ಮಾಚಿದೇವ ಬಿಜಾಪುರ ಸಿಂದಗಿ ಹಿಪ್ಪರಗಿಯಲ್ಲಿ 1170ರಲ್ಲಿ ಜನಿಸಿದರು. ಅಂದಿನ ಕಾಲಘಟ್ಟದಲ್ಲಿ ಜಾತಿ ಪದ್ಧತಿ ಕಂದಾಚಾರಗಳಿಂದಾಗಿ ಕೆಳ ಜಾತಿಗಳ ಸ್ಥಿತಿಗತಿ ಅತಿ ದಾರುಣವಾಗಿತ್ತು. ಇದಕ್ಕೆ ಕಾರಣ ಶಿಕ್ಷಣದ ಕೊರತೆಯಾಗಿತ್ತು. ಇದರ ಸೂಕ್ಷ್ಮತೆ ಅರಿತ ಮಾಚಿದೇವ ಬಸವಣ್ಣ ಅನುಯಾಯಿ ಶಿಕ್ಷಣ ಪಡೆದು ವಚನಗಳನ್ನು ಅಧ್ಯಯನ ಮಾಡಿದರು. ಸರಳ ರೀತಿಯಲ್ಲಿ ವಚನಗಳನ್ನು ಬರೆದು ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು