ಬಾಗೇಪಲ್ಲಿ: ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿ ಭಾನುವಾರ ರಾತ್ರಿ ನಡೆದ ಚಂದ್ರಗ್ರಹಣದ ವೇಳೆ ತಾಲ್ಲೂಕಿನ ಪ್ರಗತಿಪರರು, ದಲಿತ ಸಂಘಟನೆ, ಮಹಿಳೆಯರು, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳು ಕಡಲೆಪುರಿ ಮತ್ತು ಚಿಕನ್ ಕಬಾಬ್ ಸೇವಿಸಿ, ಮೌಢ್ಯಕ್ಕೆ ಸಡ್ಡು ಹೊಡೆದರು. ಜೊತೆಗೆ ಗ್ರಹಣಗಳ ಬಗ್ಗೆ ಮೌಢ್ಯತೆ ಆಚರಣೆ ಬೇಡ, ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಬೇಕು ಎಂದು ಪ್ರತಿಪಾದಿಸಲಾಯಿತು.

ಗ್ರಹಣಗಳ ಬಗ್ಗೆ ಮೌಢ್ಯತೆ, ರಾಶಿಗಳಲ್ಲಿ ಗ್ರಹಗಳ ಬದಲಾವಣೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಟಿ.ವಿ ಮಾಧ್ಯಮಗಳಲ್ಲಿ ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದರಿಂದ ಜನರು ಭಯ, ಆತಂಕ ಹಾಗೂ ಮಾನಸಿಕ ಒತ್ತಡಗಳಿಗೆ ಸಿಲುಕುತ್ತಿದ್ದಾರೆ ಎಂದು ಟೀಕಿಸಲಾಯಿತು.

ಹಿರಿಯ ವಕೀಲ ಎ.ಜಿ.ಸುಧಾಕರ್ ಮಾತನಾಡಿ, ಗ್ರಹಣ ಎಂಬುದು ವೈಜ್ಞಾನಿಕ ಪ್ರಕ್ರಿಯೆ. ಭೂಮಿ, ಸೂರ್ಯ, ಚಂದ್ರರ ನಡುವೆ ಉಂಟಾಗುವ ಸಹಜ ಪ್ರಕ್ರಿಯೆಯೇ ಗ್ರಹಣವಾಗಿದೆ. ಗ್ರಹಣಗಳ ಬಗ್ಗೆ ಕೆಲವರು ಅಪಪ್ರಚಾರ ಮಾಡಿ, ಜನರನ್ನು ಭಯಭೀತರನ್ನಾಗಿಸುತ್ತಿದ್ದಾರೆ. ರಾಶಿಗಳಲ್ಲಿ ಬದಲಾವಣೆ, ಗ್ರಹಚಾರಗಳಿಂದ ತೊಂದರೆ ಆಗುತ್ತದೆ ಎಂಬ ಹೇಳಿಕೆಗಳನ್ನು ನೀಡಲಾಗುತ್ತಿದ್ದು, ಇದು ತಪ್ಪು ಕಲ್ಪನೆ ಎಂದರು.

ಗ್ರಹಣದ ಸಂದರ್ಭದಲ್ಲಿ ಊಟ, ನೀರು ಸೇವಿಸಬಾರದು. ಗ್ರಹಣದ ನಂತರ ನೀರು ಹೊರಗೆ ಹಾಕಬೇಕು. ದರ್ಬೆ ಹಾಕಬೇಕು. ಸ್ನಾನ ಮಾಡಿ ದೀಪ ಹಚ್ಚಬೇಕು ಎಂದೆಲ್ಲಾ ಸಾಮಾಜಿಕ ಜಾಲತಾಣಗಳು ಹಾಗೂ ಟಿ.ವಿಗಳಲ್ಲಿ ಪ್ರಸಾರ ಮಾಡಲಾಗಿದೆ. ಆದರೆ ಚಂದ್ರಗ್ರಹಣದಲ್ಲಿನ ವೈಜ್ಞಾನಿಕ ಬದಲಾವಣೆಗಳನ್ನು ಪ್ರಸಾರ ಮಾಡಿಲ್ಲ. ಜನರಲ್ಲಿ ಮೌಢ್ಯತೆ ಬೆಳೆಸುವುದು ಸರಿಯಲ್ಲ ಎಂದರು.

ನ್ಯಾಷನಲ್ ಪಿಯು ಕಾಲೇಜು ಪ್ರಾಂಶುಪಾಲ ವೆಂಕಟಶಿವಾರೆಡ್ಡಿ ಮಾತನಾಡಿ, ಗ್ರಹಣಗಳ ಬಗ್ಗೆ ಗೆಲಿಲಿಯೊ, ಆರ್ಮ್ಸ್ಟ್ರಾಂಗ್ನಂತಹ ವಿಜ್ಞಾನಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಚಂದ್ರ ಹಾಗೂ ಸೂರ್ಯ ಗ್ರಹಣಗಳು ವೈಜ್ಞಾನಿಕ ಪ್ರಕ್ರಿಯೆ. ಗ್ರಹಣಗಳಿಂದ ಯಾರಿಗೂ, ಏನೂ ತೊಂದರೆ ಆಗುವುದಿಲ್ಲ. ಪ್ರತಿಯೊಬ್ಬರು ಗ್ರಹಣದ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.

ಚನ್ನರಾಯಪ್ಪ ಮಾತನಾಡಿ, ಚಂದ್ರಗ್ರಹಣ, ಸೂರ್ಯಗ್ರಹಣಗಳ ವೇಳೆ ಹೊರಗೆ ಬರಬಾರದು. ಊಟ, ನೀರು ಸೇವಿಸಬಾರದು ಎಂದೆಲ್ಲಾ ಹೇಳಲಾಗುತ್ತದೆ. ಆದರೆ, ಇದು ತಪ್ಪು, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಡಾ.ಚಿನ್ನ ಕೈವಾರಮಯ್ಯ, ಟಿ.ಲಕ್ಷ್ಮೀನಾರಾಯಣರೆಡ್ಡಿ, ಎಚ್.ಆರ್.ಸುಬ್ರಮಣ್ಯಂ, ರಮೇಶ್, ಜಿ.ಮೂರ್ತಿ, ಅಶ್ವಥ್ಥಪ್ಪ, ಜಿ.ಮುಸ್ತಾಫ, ಬಿ.ಎಚ್.ರಫೀಕ್, ಸೋಮಶೇಖರ, ಇಮ್ರಾನ್, ಆಸೀಫ್, ರಾಮಾಂಜಿ, ಜ್ಯೋತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.