ಗೌರಿಬಿದನೂರು: ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಹುಸೆನ್‌ಪುರದಲ್ಲಿ ಆಯೋಜಿಸಿದ್ದ ಬಾಬಯ್ಯ ಹಬ್ಬದ ಆಚರಣೆಯಲ್ಲಿ ಕೆಎಚ್‌ಪಿ ಫೌಂಡೇಷನ್ ಅಧ್ಯಕ್ಷ ಕೆ.ಎಚ್. ಪುಟ್ಟಸ್ವಾಮಿಗೌಡ ಭಾಗವಹಿಸಿದ್ದರು.
ಬಳಿಕ ಮಾತನಾಡಿದ ಅವರು, ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಗ್ರಾಮಗಳಲ್ಲಿ ಮುಸ್ಲಿಂ ಮತ್ತು ಹಿಂದೂಗಳು ಶ್ರದ್ಧಾಭಕ್ತಿಯಿಂದ ಆಚರಿಸುವ ಈ ಹಬ್ಬವು ಜನರಲ್ಲಿ ಸಾಮರಸ್ಯ ಮತ್ತು ಭಾವೈಕ್ಯ ಬೆಳೆಸಲು ಸಹಕಾರಿಯಾಗುತ್ತದೆ. ಇಂತಹ ಧಾರ್ಮಿಕ ಆಚರಣೆಗಳು ಗ್ರಾಮದಲ್ಲಿ ನಡೆಯುವುದರಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜು ಮಾತನಾಡಿ, ಗ್ರಾಮೀಣ ನಿತ್ಯದ ಶ್ರಮದ ಕಾರ್ಯಗಳ ನಡುವೆ ಆಚರಿ ಸುವ ಈ ಧಾರ್ಮಿಕ ಕ್ರಿಯೆಗಳು ನಿಜಕ್ಕೂ ಭಾವನಾತ್ಮಕ ಸಂಬಂಧಗಳನ್ನು ಮೂಡಿಸುತ್ತವೆ. ನಂಬಿಕೆ ಮತ್ತು ವಿಶ್ವಾಸಗಳು ಗಟ್ಟಿಗೊಳ್ಳಲು ಆಚರಣೆಗಳು ಸಹಕಾರಿಯಾಗುತ್ತವೆ. ಇಂತಹ ಧಾರ್ಮಿಕ ಆಚರಣೆಗಳಿಗೆ ಪುಟ್ಟಸ್ವಾಮಿಗೌಡ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು.
ಮುಖಂಡರಾದ ಪಿ.ಎನ್.ಶಿವಶಂಕರರೆಡ್ಡಿ, ಗಂಗಾಚಾರಿ, ಶ್ರೀಕುಮಾರ್, ಶಿವಶಂಕರ್, ರಾಮಕೃಷ್ಣ, ಆರ್.ಎನ್.ವೆಂಕಟೇಶರೆಡ್ಡಿ, ನಾಗಾರ್ಜುನ, ನಾಗರಾಜು ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.