ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜು, ಮೋಡಗಳಿಂದ ‘ನಂದಿ’ಯ ಶೃಂಗಾರ

ಚಳಿಗಾಲ ಆರಂಭ; ನಂದಿಗಿರಿಧಾಮದಲ್ಲಿ ಬೆಳ್ಳಂ ಬೆಳಿಗ್ಗೆಯೇ ಹೆಚ್ಚುತ್ತಿರುವ ಪ್ರವಾಸಿಗರ ಕಲರವ
Published 20 ಡಿಸೆಂಬರ್ 2023, 14:04 IST
Last Updated 20 ಡಿಸೆಂಬರ್ 2023, 14:04 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲಕಿನ ಐತಿಹಾಸಿಕ ನಂದಿಗಿರಿಧಾಮ ಈಗ ಪ್ರವಾಸಿಗರನ್ನು ಬರ ಸೆಳೆಯುತ್ತಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ಗಿರಿಧಾಮಕ್ಕೆ ಮಂಜು ಮುತ್ತಿಕ್ಕುತ್ತದೆ. ಪ್ರಕೃತಿ ಪ್ರಿಯರು, ಚಾರಣ ಪ್ರಿಯರು, ಪ್ರವಾಸಿಗರು  ಸಾಮಾನ್ಯ ದಿನಗಳಿಗಿಂತ ಚಳಿಗಾಲದಲ್ಲಿ ಗಿರಿಧಾಮಕ್ಕೆ ಹೆಚ್ಚು ಭೇಟಿ ನೀಡುತ್ತಾರೆ. 

ಅದೂ ಬೆಳಂ ಬೆಳಿಗ್ಗೆಯೇ. ಗಿರಿಧಾಮದ ಆರಂಭದಿಂದ ಅಂತಿಮ ಹಂತದವರೆಗೂ ಕಾಡುಗಳಿಗೆ, ಗಿರಿ ಶಿಖರಗಳಿಗೆ ಮಂಜು ಮುತ್ತಿಕ್ಕಿರುತ್ತದೆ. ತೊಟಕ್... ತೊಟಕ್... ಎಂದು ಬೀಳುವ ಮಂಜಿನ ಹನಿಗಳಲ್ಲಿ ಮೀಯಲು ಪ್ರೇಮಿಗಳು ದೊಡ್ಡ ಸಂಖ್ಯೆಯಲ್ಲಿ ಹಾಜರಿರುತ್ತಾರೆ. ಓಡುವ ಮೋಡಗಳೊಳಗೆ ಸೇರಿ ಆಹ್ಲಾದ ಅನುಭವಿಸುವರು.

ಬೆಟ್ಟ, ಕಾಡುಗಳನ್ನು ತಬ್ಬಿದ ಮಂಜಿನ ಹನಿಗಳು, ಓಡುವ ಮೋಡಗಳನ್ನು ಕಂಡು ಪುಳಕಿತರಾಗುತ್ತಾರೆ. ಬೆಳಿಗ್ಗೆ 11ರವರೆಗೂ ಮಂಜು ಬೆಟ್ಟವನ್ನು ಆವರಿಸಿರುತ್ತದೆ. ಬಿಸಿಲು ಅಡರಿದಂತೆ ಕರಗುತ್ತದೆ. ಅಷ್ಟರಲ್ಲಿ ಪ್ರವಾಸಿಗರ ಸಂಖ್ಯೆಯೂ ಕರಗುತ್ತದೆ. 

ಈ ಚಳಿಗಾಲ ಹಾಗೂ ಮಂಜಿನಲ್ಲಿ ನಂದಿಗಿರಿಧಾಮದ ಮೀಯುವ ಸಮಯದಲ್ಲಿ ನಂದಿಗಿರಿಧಾಮವನ್ನು ನೋಡುವ ಸೊಗಬಗೇ ಚೆಂದ. ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿ ಇರುವ ಕಾರಣ ಬೆಂಗಳೂರಿಗರೇ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ

‘ಪ್ರಜಾವಾಣಿ’ ಬೆಂಗಳೂರು ಕಚೇರಿಯ ಛಾಯಾಗ್ರಹಕ ಎಂ.ಎಸ್‌.ಮಂಜುನಾಥ್‌ ಬೆಳ್ಳಂ ಬೆಳಿಗ್ಗೆಯ ನಂದಿಯ ಮೂಡ್‌ಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಈ ಚಿತ್ರಗಳು ಗಿರಿಧಾಮದ ಸೌಂದರ್ಯ ವೈಭವವನ್ನು ಸಾರುತ್ತವೆ. 

ಅಲ್ನೊಡು ಎಷ್ಟು ಚೆಂದ ಇದೆ
ಅಲ್ನೊಡು ಎಷ್ಟು ಚೆಂದ ಇದೆ
ಸ್ಮೈಲ್ ಪ್ಲೀಸ್‌
ಸ್ಮೈಲ್ ಪ್ಲೀಸ್‌
ಜೊತೆಯಲ್ಲಿ ಜೊತೆ ಜೊತೆಯಲಿ
ಜೊತೆಯಲ್ಲಿ ಜೊತೆ ಜೊತೆಯಲಿ
ನಂದಿಯಲ್ಲಿ ಮಂಜಿನ ದೃಶ್ಯ ಕಾವ್ಯ
ನಂದಿಯಲ್ಲಿ ಮಂಜಿನ ದೃಶ್ಯ ಕಾವ್ಯ
ಗಿರಿಧಾಮದಲ್ಲಿ ಓಡುವ ಮೋಡಗಳೇ ಕ್ಷಣ ನಿಲ್ಲಿ
ಗಿರಿಧಾಮದಲ್ಲಿ ಓಡುವ ಮೋಡಗಳೇ ಕ್ಷಣ ನಿಲ್ಲಿ
ಬೆಳ್ಳಂ ಬೆಳಿಗ್ಗೆ ಸಾಲುಗಟ್ಟಿರುವ ವಾಹನಗಳು
ಬೆಳ್ಳಂ ಬೆಳಿಗ್ಗೆ ಸಾಲುಗಟ್ಟಿರುವ ವಾಹನಗಳು
....
....
ಮೊಡಗಳ ನಡುವೆ
ಮೊಡಗಳ ನಡುವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT