ಶಿಡ್ಲಘಟ್ಟ:‘ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ, ಶಿಡ್ಲಘಟ್ಟಕ್ಕೆ ಮತ್ತೆ ರವಿಕುಮಾರ್‘ ಎಂಬ ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಮಿತ್ರ ಪಕ್ಷ ಬಿಜೆಪಿ ಆಕ್ಷೇಪ ಎತ್ತಿದೆ.

ಇದು ಅವರ ಪಕ್ಷದ ಅಭಿಪ್ರಾಯವೇ ಹೊರತು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ನಾಯಕರ ಒಪ್ಪಿತ ತೀರ್ಮಾನವಲ್ಲ. ವಿಧಾನಸಭೆ ಚುನಾವಣೆ ಬಂದಾಗ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಬಿಜೆಪಿ, ಜೆಡಿಎಸ್ ಮೈತ್ರಿ ನಾಯಕರು ನಿರ್ಧರಿಸುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಪಕ್ಷ ಸಂಘಟನೆಗಾಗಿ ಜೆಡಿಎಸ್ನವರು ಕುಮಾರಸ್ವಾಮಿ ಅಥವಾ ಯಾರನ್ನೇ ಆಗಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡರೆ ನಮ್ಮದೇನು ತಕರಾರು ಇಲ್ಲ’ ಎಂದರು.

‘ಮಾಜಿ ಶಾಸಕ ಎಂ.ರಾಜಣ್ಣ ಅವರಿಗೂ ನನಗೂ ಯಾವುದೆ ಬಿನ್ನಾಭಿಪ್ರಾಯವಿಲ್ಲ. ಮುನಿಸೂ ಇಲ್ಲ. ಸಹಜವಾಗಿ ಅಭಿಪ್ರಾಯ ಭೇದಗಳಿರುತ್ತವೆ. ಕೆಲವೊಂದು ಪದಾಧಿಕಾರಿಗಳ ನೇಮಕ ಇನ್ನಿತರ ವಿಷಯಗಳ ವಿಚಾರವಾಗಿ ಅವರ ಬೆಂಬಲಿಗರು, ನಮ್ಮ ಬೆಂಬಲಿಗರು ಮುನಿಸಿಕೊಳ್ಳುವುದುಂಟು. ನಮ್ಮಿಬ್ಬರಿಗೂ ಪಕ್ಷ ಸಂಘಟನೆ ಮುಖ್ಯ. ಈ ನಿಟ್ಟಿನಲ್ಲಿ ಇಬ್ಬರೂ ಜತೆಯಾಗಿ ನಡೆಯಲಿದ್ದೇವೆ’ ಎಂದು ಹೇಳಿದರು.

ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದಗೌಡ, ಸುರೇಂದ್ರಗೌಡ, ಕನಕಪ್ರಸಾದ್, ನಗರಸಭೆ ಸದಸ್ಯ ನಾರಾಯಣಸ್ವಾಮಿ ಹಾಜರಿದ್ದರು.

ಕ್ಷೇತ್ರದ ಶಾಸಕರು ರೈತರ ಹಿತದೃಷ್ಟಿಯಿಂದ ಕೆಐಎಡಿಬಿಯಿಂದ ಜಮೀನು ಸ್ವಾಧೀನ ವಿಚಾರವಾಗಿ ಯಾವುದಾದರೂ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಬೇಕಾಗುತ್ತದೆ. ನಿರ್ಲಿಪ್ತತೆ ಬಿಟ್ಟು ರೈತ ಪರ ನಿಲ್ಲಬೇಕು

-ಸೀಕಲ್ ರಾಮಚಂದ್ರಗೌಡ ಜಿಲ್ಲಾಧ್ಯಕ್ಷ ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.