ಬುಧವಾರ, ಜೂನ್ 29, 2022
24 °C
ಗುಡಿಬಂಡೆ ತಾಲ್ಲೂಕಿನ ಹಳ್ಳಿಗಳಿಗೆ 89 ಎಕರೆ ಸ್ಮಶಾನ ಭೂಮಿ

ಗುಡಿಬಂಡೆ: ಸ್ಮಶಾನಗಳಿವೆ; ಅಭಿವೃದ್ಧಿ ಇಲ್ಲ!

ಜೆ.ವೆಂಕಟರಾಯಪ್ಪ Updated:

ಅಕ್ಷರ ಗಾತ್ರ : | |

Prajavani

ಗುಡಿಬಂಡೆ: ತಾಲ್ಲೂಕಿನಲ್ಲಿ ಸ್ಮಶಾನಗಳಿವೆ. ಆದರೆ, ಇವುಗಳಲ್ಲಿ ಕನಿಷ್ಠ ಮಟ್ಟದಲ್ಲಿಯೂ ಮೂಲಸೌಲಭ್ಯಗಳು ಇಲ್ಲ. ತಾಲ್ಲೂಕಿನಲ್ಲಿ ಒಟ್ಟು 105 ಗ್ರಾಮಗಳಿದ್ದು, ಈ ಪೈಕಿ 95 ಗ್ರಾಮಗಳಲ್ಲಿ ಸ್ಮಶಾನಗಳಿವೆ. 10 ಸಾವಿರ ಜನಸಂಖ್ಯೆಯುಳ್ಳ ಗುಡಿಬಂಡೆ ಪಟ್ಟಣದಲ್ಲಿಯೂ 16.20 ಎಕರೆಯಲ್ಲಿ ಸ್ಮಶಾನ ಇದೆ. 

1 ಸಾವಿರ ಜನಸಂಖ್ಯೆಗೆ 20 ಗುಂಟೆ ಪ್ರಕಾರ ಸ್ಮಶಾನಗಳಿಗೆ ಜಮೀನು ಮಂಜೂರಾಗಿದೆ. ಈ ಪ್ರಕಾರ ಗ್ರಾಮಾಂತರ ಪ್ರದೇಶದ ಸ್ಮಶಾನಕ್ಕೆ ಎಂದು ಒಟ್ಟು 89 ಎಕರೆ ಮತ್ತು ಪಟ್ಟಣಕ್ಕೆ 16.20 ಎಕರೆ ಸ್ಮಶಾನದ ಜಾಗವಿದೆ. ಹೀಗಿದ್ದರೂ ಶೇ 30ರಷ್ಟು ಸ್ಮಶಾನಗಳು ಮಾತ್ರ ಅಭಿವೃದ್ಧಿ ಕಂಡಿವೆ.

ಎಲ್ಲೆಲ್ಲಿ ಸ್ಮಶಾನ: ಪಟ್ಟಣದ ಸಂತೆ ಮೈದಾನದಲ್ಲಿ 20 ಗುಂಟೆ, ಮುಖ್ಯರಸ್ತೆ ಪಕ್ಕದಲ್ಲಿ 3 ಎಕರೆ, ವಾಪಸಂದ್ರದ ಬಳಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸ್ಮಶಾನವಿದೆ. 3 ಎಕರೆಯಲ್ಲಿರುವ ಮುಸ್ಲಿಮರ ಖಬರ್‌ಸ್ತಾನ, ಸಂತೆ ಮೈದಾನ ಮತ್ತು ಬ್ರಾಹ್ಮಣರಿಗೆ ಮೀಸಲಾಗಿರುವ ಸ್ಮಶಾನದಲ್ಲಿ ಶವ ಸಂಸ್ಕಾರಗಳು ನಡೆಯುತ್ತಿವೆ. ಇಲ್ಲಿಯೂ ಸೌಲಭ್ಯಗಳು ಇಲ್ಲ. 

ಸಂತೆ ಮೈದಾನದಲ್ಲಿನ 20 ಗುಂಟೆ ಜಾಗ 50 ವರ್ಷಗಳ ಹಿಂದೆ ಸ್ಮಶಾನಕ್ಕೆ ಮಂಜೂರಾಗಿತ್ತು. ಆಗ ಪಟ್ಟಣದ ಜನಸಂಖ್ಯೆ 2 ಸಾವಿರ ಇತ್ತು. ಈಗ 10 ಸಾವಿರ ಮೀರಿದೆ. ಈ ಸ್ಮಶಾನ ಗೋರಿಗಳಿಂದ ತುಂಬಿದೆ. ಈಗ ಜಾಗದ ಕೊರತೆ ಇದೆ. ಹಳೇ ಗೋರಿಗಳ ಮೇಲೆ ಹೊಸ ಗುಣಿ ತೆಗೆದು ಶವಗಳನ್ನು ಹೂಳಬೇಕಾದ ಸ್ಥಿತಿ ಇದೆ. 

ವಾಪಸಂದ್ರ ಸರ್ವೆ ನಂ. 76ರಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಎಂದು 5 ಎಕರೆ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಒಟ್ಟು ಮೂರು ಎಕರೆ ಜಮೀನು ಮಂಜೂರಾಗಿದೆ. ಪಹಣಿಯಲ್ಲಿಯೂ ಸ್ಮಶಾನ ಎಂದು ನಮೂದಾಗಿದೆ. ಆದರೆ, ಇಲ್ಲಿ ಕೆಲವರು ಉಳುಮೆ ಮಾಡುತ್ತಿದ್ದು ಅವರಿಂದ ಜಮೀನನ್ನು ಸ್ವಾಧೀನಕ್ಕೆ ಅಧಿಕಾರಿಗಳು ತೆಗೆದು
ಕೊಂಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು