ಭಾನುವಾರ, ಜುಲೈ 25, 2021
26 °C

ಯುವಕರಿಂದ ಪೆಟ್ರೋಲ್ ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಇಲ್ಲಿನ ಮುನ್ಸಿಪಲ್ ಬಡಾವಣೆಯ ಮನೆಗಳ ಬಳಿ ನಲ್ಲಿಸಿದ್ದ ಬೈಕ್‌ಗಳಿಂದ ನಡುರಾತ್ರಿಯಲ್ಲಿ ಮೂವರು ಯುವಕರು ಪೆಟ್ರೋಲ್ ಕಳ್ಳತನ ಮಾಡಿದ್ದಾರೆ.

ಈ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕೈಯಲ್ಲಿ ನೀರಿನ ಖಾಲಿ ಬಾಟಲಿಗಳನ್ನು ಹಿಡಿದು ಬೈಕ್‌ಗಳ ಬಳಿ ತೆರಳುವ ಯುವಕರು ನಂತರ ಆ ಬೈಕ್‌ಗಳಿಂದ ಪೆಟ್ರೋಲ್ ತೆಗೆದಿದ್ದಾರೆ. ಹೀಗೆ ಬಡಾವಣೆಯ ವಿವಿಧ ಕಡೆಗಳಲ್ಲಿ ಸಂಚರಿಸಿ ಈ ಕಳ್ಳತನ ಮಾಡಿದ್ದಾರೆ. 

ಪೆಟ್ರೋಲ್ ಬೆಲೆ ಲೀಟರ್‌ಗೆ ₹ 100 ದಾಟಿದೆ. ಪೆಟ್ರೋಲ್ ಬೆಲೆ ಹೆಚ್ಚಳವಾಗಿರುವ ಕಾರಣ ಈ ಯುವಕರು ಕಳ್ಳತನಕ್ಕೆ ಇಳಿದಿದ್ದಾರೆ ಎಂದು ಜಾಲತಾಣಗಳಲ್ಲಿ ಚರ್ಚೆಗಳು ಸಹ ನಡೆಯುತ್ತಿವೆ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು