ಬಾಗೇಪಲ್ಲಿ: ತಾಲ್ಲೂಕಿನ ಪುಟ್ಟಪರ್ತಿ ಗ್ರಾಮದಲ್ಲಿ ಜಿಲೆಟಿನ್ ಸ್ಫೋಟಕಗಳ ಶೇಖರಣೆ ಹಾಗೂ ಸಾಗಾಟವನ್ನು ತೆರವು ಮಾಡಿಸಬೇಕು. ಗ್ರಾಮಸ್ಥರ ಪ್ರಾಣಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಪುಟ್ಟಪರ್ತಿ, ಅಬಕವಾರಿಪಲ್ಲಿ ಗ್ರಾಮಸ್ಥರು ಬುಧವಾರ ಜಿಲೆಟಿನ್ ಶೇಖರಣಾ ಘಟಕದ ಮುಂದೆ ಪ್ರತಿಭಟಿಸಿದರು.

‘ತಾಲ್ಲೂಕಿನ ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟಪರ್ತಿ ಗ್ರಾಮದ ಹೊರವಲಯದ ಸರ್ವೆ ನಂ. 292/1 ಜಮೀನಿನಲ್ಲಿ ಪಂಜಾಬ್ ಮೂಲದವರು ಮನೆ ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ಶಿವನಾರಾಯಣ ಎಂಟರ್ ಪ್ರೈಸಸ್ ಹೆಸರಿನಲ್ಲಿ ಜಿಲೆಟಿನ್ ಶೇಖರಣಾ ಘಟಕ ಮಾಡಿದ್ದಾರೆ. ಪ್ರತಿನಿತ್ಯ ದ್ವಿಚಕ್ರ ಸೇರಿದಂತೆ ವಿವಿಧ ವಾಹನಗಳಲ್ಲಿ ಜಿಲೆಟಿನ್ ಸಾಗಣೆ, ಮಾರಾಟ ಮಾಡುತ್ತಿದ್ದಾರೆ. ಸರ್ಕಾರಗಳೇ ಅನುಮತಿ ನೀಡಿವೆ ಎಂದು ಹೇಳಲಾಗಿದೆ. ಆದರೆ ಹೆಚ್ಚಾಗಿ ಸ್ಫೋಟಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದರಿಂದ, ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ತೊಂದರೆ ಆಗಿದೆ. ಇದರ ರಾಸಾಯನಿಕ ಪದಾರ್ಥಗಳಿಂದ ಸುತ್ತಲೂ ಇರುವ ಗಿಡಗಳು ಸುಟ್ಟು ಕರಕಲಾಗಿದೆ. ಕೂಡಲೇ ಸ್ಫೋಟಕ ವಸ್ತುಗಳ ಶೇಖರಣಾ ಘಟಕವನ್ನು ಕೂಡಲೇ ರದ್ದುಪಡಿಸಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಮಾತನಾಡಿ, ‘ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಶೇಖರಣಾ, ಮಾರಾಟ ಮಾಡುತ್ತಿದ್ದಾರೆ. ಶಿವಮೊಗ್ಗದ ಹುಣಸೋಡಿನಲ್ಲಿ ಸ್ಫೋಟಕ ವಸ್ತುಗಳು ಸಿಡಿದು ಅಮಾಯಕರು ಪ್ರಾಣ ಕಳೆದುಕೊಂಡ ತಿಂಗಳಲ್ಲೇ ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿ ಬಳಿ ಸಹ ಸ್ಫೋಟಕಗಳು ಸಿಡಿದು 6 ಮಂದಿ ಬಲಿಯಾಗಿದ್ದಾರೆ. ಇಂತಹ ಘಟನೆಗಳಿಂದ ಇಲ್ಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಲ್ಲುಕ್ವಾರಿಗಳಲ್ಲಿ ಸ್ಫೋಟದ ವಸ್ತುಗಳನ್ನು ಸಿಡಿಸಲು ಜಿಲೆಟಿನ್ ಕಡ್ಡಿಗಳನ್ನು ಸಾಗಿಸುತ್ತಿದ್ದಾರೆ. ಇದರಿಂದ ಇಡೀ ರಾತ್ರಿಯೆಲ್ಲ ಗ್ರಾಮಸ್ಥರು ಜಾಗರಣೆ ಮಾಡುವಂತಾಗಿದೆ. ಸಾಗಾಟದ ಸಂದರ್ಭದಲ್ಲಿ ಅನಾಹುತಗಳಿಗೆ ಯಾರು ಕಾರಣ’ ಎಂದು ಪ್ರಶ್ನಿಸಿದರು.

ಗ್ರಾಮದ ಮುಖಂಡ ಕೃಷ್ಣಪ್ಪ ಮಾತನಾಡಿ, ‘ಇಲ್ಲಿನ ಜಿಲೆಟಿನ್ ಶೇಖರಣಾ ಘಟಕದಿಂದ ಆಯತಪ್ಪಿ ಸಿಡಿದರೆ ಸುತ್ತಮುತ್ತಲಿನ ಗ್ರಾಮಗಳು ಅಲ್ಲದೇ, ಬಾಗೇಪಲ್ಲಿ, ಚಿಕ್ಕಬಳ್ಳಾಪುರದವರಿಗೂ ಹರಡುವ ಸಾಧ್ಯತೆಗಳು ಇದೆ. ಶೇಖರಣಾ ಘಟಕವನ್ನು ಬೇರೆಗೆ ವರ್ಗಾಯಿಸಬೇಕು. ಜಿಲ್ಲಾಧಿಕಾರಿ, ಪೊಲೀಸ್ ಹಿರಿಯ ಅಧಿಕಾರಿಗಳು ಗಮನಹರಿಸಿ, ಸ್ಥಳ ಪರಿ
ಶೀಲನೆ ಮಾಡಬೇಕು. ಜಿಲೆಟಿನ್ ಘಟಕವನ್ನು ರದ್ದುಪಡಿಸಬೇಕು’ ಎಂದರು.

ಪುಟ್ಟಪರ್ತಿ ಗ್ರಾಮಕ್ಕೆ ತಹಶೀಲ್ದಾರ್ ಡಿ.ವಿ.ದಿವಾಕರ್ ಬಂದು ಸ್ಥಳ ಪರಿಶೀಲನೆ ಮಾಡಿದರು. ಕಂದಾಯ ಅಧಿಕಾರಿಗಳಿಗೆ ವರದಿ ನೀಡುವಂತೆ ತಿಳಿಸಲಾಗಿದೆ. ವರದಿಯನ್ನು ಜಿಲ್ಲಾಧಿಕಾರಿ ಅವರಿಗೆ ಕಳುಹಿಸಲಾಗುವುದು ಎಂದು ತಹಶೀಲ್ದಾರ್ ಭರ ವಸೆ ನೀಡಿದರು. ಅಧಿ ಕಾರಿಗಳು ಸ್ಪಂದಿಸದಿದ್ದಲ್ಲಿ ಜಿಲೆಟಿನ್ ಕಟ್ಟಡ ತೆರವು ಮಾಡುವವರಿಗೂ ಧರಣಿ ಹಮ್ಮಿಕೊಳ್ಳ ಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಗಂಗಪ್ಪ, ಜಿ.ಎನ್. ಕೃಷ್ಣಪ್ಪ, ಆಕುಲ ಆದಿನಾರಾಯಣಪ್ಪ, ವೆಂಕಟಸ್ವಾಮಿ, ನಾಗಿರೆಡ್ಡಿ, ವಿನೋದ, ಪರಮೇಶ್, ಎಸ್.ಬಾಲಾಜಿ, ಸುಧಾಕರ್, ಆಂಜಿನಪ್ಪ, ಚಿನ್ನಪ್ಪಯ್ಯ, ಗೋವಿಂದಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.