ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಮಾರ್ಗಮಧ್ಯೆ ಕೆಟ್ಟು‌ನಿಲ್ಲುವ ಬಸ್‌, ಪ್ರಯಾಣಿಕರಿಗೆ ತೊಂದರೆ

Published 18 ಫೆಬ್ರುವರಿ 2024, 15:41 IST
Last Updated 18 ಫೆಬ್ರುವರಿ 2024, 15:41 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕು ಕೇಂದ್ರದಲ್ಲಿನ ಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿನ 58ಕ್ಕೂ ಹೆಚ್ಚು ಬಸ್‌ಗಳು ಸಂಚಾರಕ್ಕೆ ಯೋಗ್ಯವಿಲ್ಲದೆ ಸಂಚರಿಸುತ್ತಿವೆ. ಬಸ್ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಬಾಗೇಪಲ್ಲಿ ಸಾರಿಗೆ ಘಟಕದಲ್ಲಿ 100ಕ್ಕೂ ಹೆಚ್ಚು ಬಸ್ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತವೆ‌. ಸಂಚಾರಕ್ಕೆ ಯೋಗ್ಯ ಇರುವ ಬಸ್‌ಗಳನ್ನು ಬೆಂಗಳೂರು, ಮೈಸೂರು, ತಿರುಪತಿ, ಪುಟ್ಟಪರ್ತಿ, ಧರ್ಮಾವರಂ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚಾರಕ್ಕೆ ಅವಕಾಶ ಮಾಡಿದ್ದಾರೆ.

ಆದರೆ ಚಿಂತಾಮಣಿ, ಪಾತಪಾಳ್ಯ, ಜೂಲಪಾಳ್ಯ, ಚೇಳೂರು, ಗೂಳೂರು, ಚಾಕವೇಲು ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸಲು ಸರಿಯಾದ ಬಸ್‌ಗಳು ಇಲ್ಲವಾಗಿವೆ. ಸೈಲನ್ಸರ್, ಬ್ರೇಕ್, ಎಂಜಿನ್ ಸಮಸ್ಯೆಗಳಿಂದ ಬಸ್ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಇದರಿಂದ ಗ್ರಾಮೀಣ ಭಾಗಗಳ ಪ್ರಯಾಣಿಕರಿಗೆ ಹಾಗೂ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗಿದೆ.

ಬಡ ಜನರು ಸಂಚರಿಸುವ ಸರ್ಕಾರಿ ಬಸ್‌ಗಳನ್ನು ಸಂಚಾರಕ್ಕೆ ಯೋಗ್ಯತೆ ಇರುವಂತೆ ರಿಪೇರಿ ಮಾಡಿಸಬೇಕು. ಹೊಸ ಬಸ್‌ಗಳನ್ನು ಗ್ರಾಮೀಣ ಭಾಗಗಳಿಗೆ ಸಂಚರಿಸುವಂತೆ ಮಾಡಬೇಕು ಎಂದು ಮಹಿಳಾ ಮುಖಂಡರಾದ ರಾಮಲಕ್ಷ್ಮಮ್ಮ ಒತ್ತಾಯಿಸಿದರು.

ಘಟಕದಲ್ಲಿನ ಬಸ್‌ ಮಾರ್ಗಗಳಲ್ಲಿ ಕೆಟ್ಟು ನಿಲ್ಲುತ್ತಿರುವ ಬಗ್ಗೆ ಪ್ರಯಾಣಿಕರಿಂದ ತಿಳಿದುಬಂದಿದೆ. ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಗುಣಮಟ್ಟದ ಬಸ್ ಸಂಚಾರಕ್ಕೆ ಕಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಚಿಕ್ಕಬಳ್ಳಾಪುರ ವಿಭಾಗದ ಬಾಗೇಪಲ್ಲಿ ರಸ್ತೆ ಸಾರಿಗೆ ಬಸ್ ಘಟಕದ ಪ್ರಭಾರಿ ವ್ಯವಸ್ಥಾಪಕ ಶ್ರೀನಿವಾಸಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT