ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಮಾನವೀಯತೆ ಮೆರೆದ ರೈಲ್ವೆ ಕಾನ್‌ಸ್ಟೆಬಲ್‌

ವಾರಸುದಾರರು ಪತ್ತೆಯಾಗದ ಅನಾಥ ಶವಕ್ಕೆ ಅಂತ್ಯಸಂಸ್ಕಾರ
Last Updated 18 ಜನವರಿ 2020, 9:52 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಆವತಿ ರೈಲ್ವೆ ನಿಲ್ದಾಣದ ಬಳಿ ಜ.10 ರಂದು ಹಳಿ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ವಾರಸುದಾರರ ಪತ್ತೆಯಾಗದ ಕಾರಣ, ಅನಾಥ ಶವಕ್ಕೆ ರೈಲ್ವೆ ಹೊರ ಉಪಠಾಣೆಯ ಮುಖ್ಯ ಕಾನ್‌ಸ್ಟೆಬಲ್‌ ನಾಗೇಂದ್ರಸ್ವಾಮಿ ಅವರು ಶುಕ್ರವಾರ ನಗರದ ಅಪ್ಪಯ್ಯನಕುಂಟೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದ ಸುಮಾರು 30 ವಯಸ್ಸಿನ ವ್ಯಕ್ತಿಯ ಶವವನ್ನು ರೈಲ್ವೆ ಪೊಲೀಸರು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ, ಒಂದು ವಾರದಿಂದ ವಾರಸುದಾರರ ಪತ್ತೆಗಾಗಿ ಪ್ರಯತ್ನಪಟ್ಟಿದ್ದರು. ಆದರೆ ಕೊನೆಗೆ ವಾರಸುದಾರರು ಪತ್ತೆಯಾಗದ ಕಾರಣ, ಅಂತಿಮವಾಗಿ ನಾಗೇಂದ್ರಸ್ವಾಮಿ ಅವರು ಅನಾಥ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ, ಜೆಸಿಬಿ ಮೂಲಕ ಗುಂಡಿ ತೆಗೆಸಿ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ಮಾಡುವ ಮೂಲಕ ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT